ಪದಾಧಿಕಾರಿ ಆಯ್ಕೆ (ಸುದ್ದಿ ಸಂಕ್ಷೇಪ)
ಮೂಡಿಗೆರೆ: ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರಂಜನ್ ಅಜೀತ್ ಕುಮಾರ್ ಮತ್ತು ಅವತಿ ಹೋಬಳಿಯ ಎಚ್.ಎನ್. ಕೃಷ್ಣೇಗೌಡರನ್ನು ಪಕ್ಷದ ವರಿಷ್ಟ ಎಚ್.ಡಿ. ಕುಮಾರಸ್ವಾಮಿಯವರು ನೇಮಕಗೊಳಿಸಿದ್ದಾರೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ ಹೇಳಿದ್ದಾರೆ. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾಗಿ ಬಾಳೂರು ಹೋಬಳಿಯ ಎಂ.ವಿ. ಜಗದೀಶ್, ಬಾಳೂರು ಹೋಬಳಿ ಘಟಕದ ಅಧ್ಯಕ್ಷರಾಗಿ ಬಿ.ಎಸ್. ಲಕ್ಷ್ಮಣ್, ಮೂಡಿಗೆರೆ ಕ್ಷೇತ್ರ ಸಮಿತಿ ಮಹಿಳಾ ಘಟಕದ ಅಧ್ಯಕ್ಷರಾಗಿ ವಿಶಾಲ ನಾಗರಾಜ್, ಕ್ಷೇತ್ರ ಸಮಿತಿ ಉಪಾಧ್ಯಕ್ಷರಾಗಿ ಬಾಳೆಹಳ್ಳಿ ನಾಗರಾಜ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಗೌರವಾಧ್ಯಕ್ಷರಾಗಿ ಉಮರಬ್ಬ, ತಾಲೂಕು ಅಲ್ಪಸಂಖ್ಯಾತರ ಘಟಕದ ಗೌರವಾಧ್ಯಕ್ಷರಾಗಿ ಶಬ್ಬೀರ್ ಅಹಮ್ಮದ್, ಕಾರ್ಯದರ್ಶಿಯಾಗಿ ಮೊಹಮ್ಮದಾಲಿ ಕೃಷ್ಣಾಪುರ, ರೈತ ವಿಭಾಗದ ಅಧ್ಯಕ್ಷರಾಗಿ ಸುರೇಂದ್ರ ಹ್ಯಾರಗುಡ್ಡೆ ನೇಮಕ ಗೊಂಡಿದ್ದು, ಜೆಡಿಎಸ್ ಯುವ ಘಟಕದ ಕಾರ್ಯದರ್ಶಿಯಾಗಿ ಆದರ್ಶ ಕೊಟ್ಟಿಗೆಹಾರ, ಸಂಘಟನಾ ಕಾರ್ಯದರ್ಶಿಯಾಗಿ ತಿಲಕ್ ಬಾಳೂರು, ನಗರ ಘಟಕದ ಮಹಿಳಾ ಅಧ್ಯಕ್ಷರಾಗಿ ಜಯಲಕ್ಷ್ಮಮ್ಮ, ಕಾರ್ಯದರ್ಶಿಯಾಗಿ ವೀಣಾ ಎಚ್. ಆಚಾರ್, ನಗರ ಘಟಕದ ಕಾರ್ಯದರ್ಶಿಯಾಗಿ ಪುಷ್ಪ ಶ್ರೀನಿವಾಸ್, ಬ್ಲಾಕ್ ಉಪಾಧ್ಯಕ್ಷರಾಗಿ ಶ್ರೀನಿವಾಸ್ ಬಕ್ಕಿ, ಬ್ಲಾಕ್ ಕಾರ್ಯದರ್ಶಿಯಾಗಿ ಹಂತೂರು ಪ್ರಶಾಂತ್, ಬಣಕಲ್ ಹೋಬಳಿ ಗೌರವಾಧ್ಯಕ್ಷರಾಗಿ ದೇವದಾಸ್ರನ್ನು ನೇಮಕಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ನಿಶ್ಚಿತ
ತರೀಕೆರೆ: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಂಡಿತ ಎಂದು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ, ಮಾಜಿ ಪುರಸಭಾಧ್ಯಕ್ಷ ಎಂ. ನರೇಂದ್ರ ತಿಳಿಸಿದ್ದಾರೆ. ಅವರು ಭಾನುವಾರ ಸುದ್ದಿಗಾರರೊಡನೆ ಮಾತನಾಡುತ್ತಿದ್ದರು. ತಾಲೂಕಿನಲ್ಲಿ ಪಕ್ಷ ಗೆಲುವು ಸಾಧಿಸುವುದು ನಿಶ್ಟಯ. ಎಚ್.ಡಿ. ಕುಮಾರಸ್ವಾಮಿ ರಾಜ್ಯಕ್ಕೆ ಮತ್ತೆ ಮುಖ್ಯಮಂತ್ರಿಗಳಾಗುವುದು ಖಂಡಿತ ಎಂದು ಅವರು ತಿಳಿಸಿದ್ದಾರೆ.