ಸಾಮಾನ್ಯ ಜ್ಞಾನ ಸ್ಪರ್ಧೆ: ವೈಷ್ಣವಿ ರಾವ್ ಆಯ್ಕೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 30
ನಗರದ ಉಂಡೇದಾಸರಹಳ್ಳಿಯ ಸೆಂಟ್ ಮೆರೀಸ್ ಇಂಟರ್ ನ್ಯಾಷನಲ್ ಸ್ಕೂಲ್ನ 3ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಎನ್. ರಾವ್ ಆಲ್ ಇಂಡಿಯಾ ಜನರಲ್ ನಾಲೆಡ್ಜ್ ಕಾಂಪಿಟೇಟಿವ್ ಪರೀಕ್ಷೆಯ ಸಬ್ ಜ್ಯೂನಿಯರ್ ಲೆವೆಲ್ ಒನ್ ನಲ್ಲಿ ಆಲ್ ಇಂಡಿಯಾ 29ನೇ ರ್ಯಾಂಕ್ ಪಡೆದು ಮೆರಿಟ್ ಸ್ಕಾಲರ್ ಶಿಪ್ಗೆ ಅರ್ಹತೆ ಪಡೆದಿದ್ದಾಳೆ.
ಕಳೆದ ಡಿಸೆಂಬರ್ನಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸಿತ್ತು ಎಂದು ಸಂಸ್ಥೆಯ ಸಂಸ್ಥಾಪಕರಾದ ಜೆರಾಲ್ಡ್ ಲೊಬೋ ತಿಳಿಸಿದ್ದಾರೆ.
ಅಭಿನಯ, ನೃತ್ಯ, ಗಾಯನ ಮುಂತಾದ ಕಲೆಗಳಲ್ಲೂ ಪುಟ್ಟ ಹೆಜ್ಜೆ ಇಡುತ್ತಿರುವ ಈ ಬಾಲಕಿ ಕಲ್ಕಟ್ಟೆ ಪುಸ್ತಕದ ಮನೆಯ ಎಚ್.ಎಂ. ನಾಗರಾಜರಾವ್ ಹಾಗೂ ರೇಖಾ ನಾಗರಾಜರಾಜ್ಅವರ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಪ್ರಾಚಾರ್ಯರು, ಆಡಳಿತ ಮಂಡಳಿ, ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ.