ಹರಕೋಡು ಗ್ರಾಮದ ಯುವತಿ ನಾಪತ್ತೆ: ಪ್ರಕರಣ ದಾಖಲು
ಕ.ಪ್ರ ವಾರ್ತೆ, ಶೃಂಗೇರಿ, ಮಾ.30
ತಾಲೂಕಿನ ಮರ್ಕಲ್ ಪಂಚಾಯಿತಿ ಗಂಡಘಟ್ಟ ಹರಕೋಡು ಗ್ರಾಮದಿಂದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದೆ.
ಹರಕೋಡು ಶಿಲ್ಪ (22) ಮಾ.28ರಿಂದ ನಾಪತ್ತೆಯಾಗಿರುತ್ತಾಳೆ. 5.2 ಅಡಿ ಎತ್ತರವಿದ್ದು, ಗೋದಿ ಮೈಬಣ್ಣ ಹೊಂದಿದ್ದಾಳೆ. ಕನ್ನಡ, ಇಂಗ್ಲಿಷ್ ಬಲ್ಲವಳಾಗಿದ್ದು ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಅರಶಿನ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈಕೆಯ ಬಗ್ಗೆ ಮಾಹಿತಿ ಕಂಡುಬಂದಲ್ಲಿ 08265-257150 ಸಂಖ್ಯೆಗೆ ತಿಳಿಸಬೇಕಾಗಿ ಕೋರಲಾಗಿದೆ.