ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೊನಲು ಬೆಳಕಿನ ಕುಸ್ತಿ ಸ್ಪರ್ಧೆ ವಿಜೇತರು

Rashmi Kasaragodu
Updated On : 31 Mar 2013, 12:28 pm

ಬೀರೂರು: ಪಟ್ಟಣದ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಶಿವಾಜಿ ವ್ಯಾಯಾಮ ಶಾಲೆ, ಪುರಸಭೆ ಹಾಗೂ ಪಟ್ಟಣದ ನಾಗರಿಕರ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕುಸ್ತಿ ಸ್ಪರ್ಧೆಗಳಲ್ಲಿ ವಿಜೇತ ಕುಸ್ತಿಪಟುಗಳ ವಿವರ ಈ ರೀತಿಯಿದೆ.
ರು. 10 ಲಕ್ಷ ಅಖಾಡ ಕುಸ್ತಿಯಲ್ಲಿ ದಾವಣಗೆರೆಯ ಎಲ್. ಲೋಕೇಶ್ ಶೆಟ್ಟಿ, ಹೊಳೆಹೊನ್ನೂರಿನ ರಮೇಶ್ ಪವಾರ್ರನ್ನು ಸೋಲಿಸಿ ರು. 10 ಸಾವಿರ ನಗದು ಪ್ರಶಸ್ತಿ ಪಡೆದರು. ಶ್ರೀರಂಗಪಟ್ಟಣದ ವಿನಯರನ್ನು ಸೋಲಿಸಿ ಬಸವರಾಜು ಕಂಠೀರವ ಪ್ರಶಸ್ತಿ ಟ್ರೋಫಿ ರು. 3 ಸಾವಿರ ನಗದು ತನ್ನದಾಗಿಸಿಕೊಂಡರು.
ದಾವಣಗೆರೆಯ ಆನಂದ್ ಬೆಳಗಾಂ ನ ಶಾಂತಪ್ಪರನ್ನು ಸೋಲಿಸಿ ಟ್ರೊಫಿ 3ಸಾವಿರ ರು. ನಗದು ಹಾಗೂ ಸಂಗೊಳ್ಳಿರಾಯಣ್ಣ ಪ್ರಶಸ್ತಿ ಗೆದ್ದರು. ಬಿಜಾಪುರದ ಸೈಫುಲ್ಲಾ ಬೆಳಗಾಮಿನ ಗಣೇಶ್ ಪಾಟೀಲರನ್ನು ಸೋಲಿಸಿ ರು. 4 ಸಾವಿರದ ಅಂಜುಮಾನ್ ಪ್ರಶಸ್ತಿ ಗೆದ್ದರು. ಭದ್ರಾವತಿಯ ನಾಗರಾಜ್ ದಾವಣಗೆರೆಯ ಹಾಲಸ್ವಾಮಿಯನ್ನು ಸೋಲಿಸಿ ಟ್ರೋಫಿ, ರು. 4 ಸಾವಿರ ನಗದು ಹಾಗೂ ಮದೀನ ಪ್ರಶಸ್ತಿ ತನ್ನದಾಗಿಸಿಕೊಂಡರು.
ಭೀಮಾ ಜೀರಗಾಳ್ ಇಂಡಿಯ ಸುರೇಶ್ರನ್ನು ಸೋಲಿಸಿ ಬಂಗಾರದ ಪದಕ ರು. 1ಸಾವಿರ ನಗದು ಮತ್ತು ಸವಿತ ಸಮಾಜದ ಪ್ರಶಸ್ತಿ ಸ್ವೀಕರಿಸಿದರು. ಅಂತರಘಟ್ಟಮ್ಮ ಪ್ರಶಸ್ತಿಯನ್ನು ಬೆಳಗಾಂನ ಭೀಮಾ ಮತ್ತು ದಾವಣಗೆರೆಯ ಹಾಲಸ್ವಾಮಿ ಸಮನಾಗಿ ಹಂಚಿಕೊಂಡರು. ಶ್ರೀ ವೀರಭದ್ರ ಸ್ವಾಮಿ ಪ್ರಶಸ್ತಿಯನ್ನು ಬೀರೂರಿನ ಗುರುಪ್ರಸಾದ್ ಇಂಡಿಯ ಸಿದ್ದರವರನ್ನು ಸೋಲಿಸುವ ಮೂಲಕ ಪಡೆದು ಬೆಳ್ಳಿಕಪ್ ಮತ್ತು 2 ಸಾವಿರ ರು. ನಗದು ಪಡೆದರು. ಕೂಡ್ಲಿಗಿಯ ಶಿವು ಬೆಳಗಾಂನ ಇಬ್ರಾಹಿಂರನ್ನು ಸೋಲಿಸಿ ಬೆಳ್ಳಿಕಪ್ಪು, 2 ಸಾವಿರರು. ನಗದು ಮತ್ತು ಮೈಲಾರಲಿಂಗಸ್ವಾಮಿ ಪ್ರಶಸ್ತಿ ಪಡೆದರು.
ಹೊಳೆಹೊನ್ನೂರಿನ ರಮೇಶ್ ಪವಾರ್ ಸಾಂಗ್ಲಿಯ ರಮೇಶ್ರನ್ನು ಮಣಿಸಿ ಟ್ರೊಫಿ 2ಸಾವಿರ ರು. ನಗದು ಪಡೆದು ಭಗೀರಥ ಮಹರ್ಷಿ ಪ್ರಶಸ್ತಿ ಪಡೆದರು. ದಾವಣಗೆರೆಯ ಮಹದೇವ ಶಿಂಧೆ ಹಳಿಯಾಳದ ಶ್ರೀಕಾಂತ್ ಮಡಿಯಾಳರನ್ನು ಸೋಲಿಸಿ ಬೆಳ್ಳಿಕಪ್ಪು 2ಸಾವಿರ ರು. ನಗದು ಮತ್ತು ಮರಾಠ ಶಿವಾಜಿ ಪ್ರಶಸ್ತಿ ಸ್ವೀಕರಿಸಿದರು. ಬೆಳಗಾಂನ ಅಪ್ಪುಸಾಬ್ ದಾವಣಗೆರೆಯ ಗುರುಲಿಂಗರನ್ನು ಸೋಲಿಸಿ 2,500ರು. ನಗದು ಪಡೆದು ಪುರಸಭಾ ಪೌರ ಪ್ರಶಸ್ತಿ ಪಡೆದರು.
ಶಿವಮೊಗ್ಗದ ಕಾಂತರಾಜು ಬೆಳಗಾಂನ ಸಿದ್ದುರವರನ್ನು ಪರಾಜಯಗೊಳಿಸಿ  3 ಸಾವಿರರು. ನಗದು ಮತ್ತು ಕನ್ನಡ ಸಂಘ ಪ್ರಶಸ್ತಿ ಪಡೆದರು. ಶಿಕಾರಿಪುರದ ಶ್ರೀನಿವಾಸ್ ಜಂಭರಘಟ್ಚದ ಅಶೋಕರನ್ನು ಸೋಲಿಸಿ 2ಸಾವಿರ ರು. ನಗದಿನೊಂದಿಗೆ ಕನಕ ಶ್ರೀ ನೌಕರರ ಬಳಗ ಪ್ರಶಸ್ತಿ ಪಡೆದರು.
ಧಾರವಾಡದ ಪಾಲಾಕ್ಷಗೌಡ ಮತ್ತು ದಾವಣಗೆರೆಯ ಯೋಗೀಶ್ ಕಾರ್ಪೆಂಟರ್ ಪ್ರಶಸ್ತಿಯನ್ನು ಸಮನಾಗಿ ಹಂಚಿಕೊಂಡರು. ಬೀರೂರಿನ ಪೋಲೀಸ್ ಕುಮಾರ್ ಜಂಭರಘಟ್ಟದ ಪ್ರವೀಣ್ರನ್ನು ಸೋಲಿಸಿ 1 ಸಾವಿರ ನಗದಿನೊಂದಿಗೆ ವಾಲ್ಮೀಕಿ ಸಂಘ ಪ್ರಶಸ್ತಿ ಸ್ವೀಕರಿಸಿದರು. ರಿಯಾಜ್ ಮುಲ್ಲಾ ಇಂಗಳಗಿಯ ಸಿದ್ದಪ್ಪರನ್ನು 1500ರು. ನಗದು ಟ್ರೊಫಿ ಮತ್ತು ಆಟೋ ಚಾಲಕರು ಮಾಲಿಕರ ಸಂಘದ ಪ್ರಶಸ್ತಿ ಪಡೆದರು. ಸಣ್ಣ ರೈತರ ಬಳಗದ ಪ್ರಶಸ್ತಿ ಹಾಗೂ 1 ಸಾವಿರ ರು. ನಗದನ್ನು ಭದ್ರಾವತಿಯ ಸುನೀಲ್ ಜಂಭರಘಟ್ಟದ ಅಶೋಕ್ರನ್ನು ಪರಾಭವಗೊಳಿಸಿ ತನ್ನದಾಗಿಸಿಕೊಂಡರು.
ಬೆಳಗಾಂನ ಶಾಂತಪ್ಪ ಬೆಳಗಾಂನ ಸಿದ್ದರನ್ನು ಸೋಲಿಸಿ 1,500ರು. ನಗದು ಮತ್ತು ವೀರಭದ್ರ ಅಡುಗೆ ಕಾರ್ಮಿಕರ ಸಂಘ ಪ್ರಶಸ್ತಿ ಪಡೆದರು. ಗುಲ್ಬರ್ಗದ ಶಿವಾನಂದ ಬೆಳ್ಳುಳ್ಳಿಯ ಹಂಶಿದ್ರನ್ನು ಸೋಲಿಸಿದರೆ, ಶಿವಮೊಗ್ಗದ ಶ್ರೀಕಂಠ ಹವರಗೆರೆಯ ಬಸವರಾಜುರನ್ನು ಸೋಲಿಸಿ ತಲಾ 1 ಸಾವಿರ ನಗದು ಮತ್ತು ಕುಂಬಾರ ಯುವಕ ಸಂಘ ಪ್ರಶಸ್ತಿ ಪಡೆದರು. ವೀರಭದ್ರಸ್ವಾಮಿ ಪ್ರಶಸ್ತಿಯನ್ನು ಮತ್ತು ತಲಾ 1 ಸಾವಿರರು. ನಗದನ್ನು ಶಿಕಾರಿಪುರದ ಶಿವರಾಜ್ ಮತ್ತು ಬಿಜಾಪುರದ ರಾಜು ತಮ್ಮದಾಗಿಸಿಕೊಂಡರು. ಧಾರವಾಡದ ಶರವಣ ಶಾವಂತ್ ಬೆಳಗಾಂ ಮರುಳಸಿದ್ದರನ್ನು ಸೋಲಿಸಿದರೆ, ದಾವಣಗೆರೆಯ ಚಂದ್ರು ಲಕ್ಷ್ಮೇಶ್ವರದ ನಾಗರಾಜ್ರನ್ನು ಸೋಲಿಸಿ ತಲಾ 1 ಸಾವಿರ ರು. ನಗದು ಮತ್ತು ಬಸವ ಗದ್ದುಗೆ ಯುವಕ ಸಂಘ ಪ್ರಶಸ್ತಿ ತಮ್ಮದಾಗಿಸಿಕೊಂಡರು.
 ಕುಸ್ತಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ದಾನಿ ಮಾರ್ಗದ ಮಲ್ಲಿಕಾರ್ಜುನಪ್ಪ, ಬಿಜೆಪಿ ಮುಖಂಡ ಬೀರೂರು ದೇವರಾಜ್, ಜಿಪ ಸದಸ್ಯ ಬಿ.ಪಿ. ನಾಗರಾಜು, ಕುಸ್ತಿ ಸಮಿತಿಯ ಮುಖಂಡ ಹಾಗೂ ಪುರಸಭಾ ಸದಸ್ಯ ಡಿ.ಆರ್. ಯತೀಶ್, ಮಾಜಿ ಪುರಸಭಾಧ್ಯಕ್ಷ ದಯಾನಂದ್,ಪ್ರಕಾಶ್, ಎಸ್. ರಮೇಶ್, ಮಾಲು ಸ್ಲೀಪರ್ ವಿ.ಜಿ. ಒಡೆಯರ್, ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಕಾಂತರಾಜ್ ನೂತನ ಪುರಸಭಾ ಸದಸ್ಯರು, ಹಿರಿಯಪಟು ಓಂಕಾರ್, ತೀರ್ಪುಗಾರರಾದ ಹೂವಿನ ಬಸಣ್ಣ, ಮಂಜುನಾಥ್, ಕಲ್ಲೇಶ್, ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement