ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

5 ವರ್ಷದ ಅಭಿವೃದ್ಧಿಯೇ ಸಾಧನೆ: ಶಾಸಕ ಎಂ.ಪಿ.ಕುಮಾರಸ್ವಾಮಿ

Lingaraj Badiger
Updated On : 1 Apr 2013, 11:20 am

ಕ.ಪ್ರ.ವಾರ್ತೆ, ಮೂಡಿಗೆರೆ, ಮಾ.31 ಐದು ವರ್ಷಗಳ ಕಾಲ ಸರ್ಕಾರವನ್ನು ವಿಘ್ನ ಹಾಗೂ ಗೊಂದಲ ಕಾಡಿದ್ದು ಸತ್ಯ. ಆದರೆ ಸರ್ಕಾರ ಯಾರಿಗೂ ದ್ರೋಹ ಬಗೆದಿಲ್ಲ. ಕಾಂಗ್ರೆಸ್, ಜೆಡಿಎಸ್ ಕಳೆದ 45 ವರ್ಷದಿಂದ ಮಾಡದ ಸಾಧನೆಯನ್ನು ಬಿಜೆಪಿ ಅಧಿಕಾರಕ್ಕೆ ಬಂದ 5 ವರ್ಷದಲ್ಲಿ ಸಾಧಿಸಿದೆ. ಇನ್ನು ಅಭಿವೃದ್ಧಿ ಮಾಡಲು ಆಶೀರ್ವಾದ  ಮಾಡುವಂತೆ ಮತದಾರ ಬಳಿ ತೆರಳಲು ನಿರ್ಧರಿಸಿರುವುದಾಗಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಿಳಿಸಿದರು.
  ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವುದರೊಂದಿಗೆ ಸತತವಾಗಿ 2  ಬಾರಿ ಜಯಗಳಿಸಿದ ತಮಗೆ ಈ ಬಾರಿ ಟಿಕೆಟ್ ಇಲ್ಲವೆಂದು ಸುಳ್ಳು ವದಂತಿಯನ್ನು ಕೆಲವು ಕಿಡಿಗೇಡಿಗಳು ಹಬ್ಬಿಸುತ್ತಿದ್ದು, ಈ ವದಂತಿಗಳಿಗೆ ಮತದಾರರು ಕಿವಿಗೊಡಬಾರದು ಎಂದರು.
ಶಿಸ್ತಿನ ಸಿಪಾಯಿ: ತಾವು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, 2 ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸುವುದರ ಮೂಲಕ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡಿದ್ದರಿಂದಲೇ ಈ ಬಾರಿಯು ಪಕ್ಷದ ವರೀಷ್ಠರು ನನಗೆ ಸ್ಪರ್ಧಿಸಲು ಬಿ. ಫಾರಂ ನೀಡಿದ್ದಾರೆ. ಹೀಗಿರುವಾಗ ನಾನೇಕೆ ಬೇರೆ ಪಕ್ಷಕ್ಕೆ ಹೋಗಬೇಕು ಎಂದರು.
 ತಮ್ಮ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ರಸ್ತೆ, ಸಮುದಾಯ ಭವನ, ವಿದ್ಯುತ್, ಚರಂಡಿ, ಕುಡಿಯುವ ನೀರು, ಕಳಸ ಭಾಗದಲ್ಲಿ 7 ತೂಗು ಸೇತುವೆ, 10 ಸಿಮೆಂಟ್ ಸೇತುವೆ, ನಕ್ಸಲ್ ಪೀಡಿತ ಪ್ರದೇಶದ ಮೂಲ  ಸೌಕರ್ಯಕ್ಕೆ ರು. 5 ಕೋಟಿ, ಬಸವ ಕಲ್ಯಾಣ ಹಾಗೂ ಇಂದಿರಾ ಅವಾಜ್ ಯೋಜನೆಯಡಿ 5 ಸಾವಿರ ಮನೆಗಳನ್ನು ವಿತರಿಸಲಾಗಿದೆ.
 ದೇವಸ್ಥಾನ ಅಭಿವೃದ್ಧಿಗೆ ರು. 30ಕೋಟಿ, ಎಂಡಿಆರ್  ಹಾಗೂ ರಸ್ತೆ ಅಭಿವೃದ್ಧಿಗೆ ರು. 18 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ ರಸ್ತೆ ಅಭಿವೃದ್ಧಿಗೆ ರು. 4 ಕೋಟಿ, ಕುಡಿಯುವ ನೀರಿಗೆ ರು. 35 ಕೋಟಿ ಏತ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ರ್ಪೂರ್ಣಗೊಂಡಿದ್ದು, ಇನ್ನು ಅನೇಕ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಅಭಿವೃದ್ಧಿ ಪಥಕ್ಕೆ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement