ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂತರಂಗದಲ್ಲಾಗುವ ಅನ್ಯಭಾವಗಳು ವ್ಯಕ್ತವಾಗಲಿ

Lingaraj Badiger
Updated On : 1 Apr 2013, 11:08 am

ಕ.ಪ್ರ.ವಾರ್ತೆ,ಚಿತ್ರದುರ್ಗ, ಮಾ.31
ಕನ್ನಡ ಕಾವ್ಯ ಸಂದರ್ಭದಲ್ಲಿ ಕವಿಗಳು ಬುದ್ಧಿಭಾವಗಳ ವಿದ್ಯುದಾಲಿಂಗನ ತಂದುಕೊಳ್ಳಬೇಕಾದ ಸವಾಲು ಇದೆ ಎಂದು ವಿಮರ್ಶಕಿ ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.
ಭಾನುವಾರ ಇಲ್ಲಿನ ಐಎಂಎ ಸಭಾಂಗಣದಲ್ಲಿ ಅಭಿರುಚಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾವ್ಯಾನುಸಂಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕವಯಿತ್ರಿಯರು ನವ್ಯ ಕಾವ್ಯದ ಶೈಲಿಯಲ್ಲಿ ಬರೆಯುತ್ತಿರುವ ಬಗ್ಗೆ ಕೆಲ ಪ್ರಮುಖರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಶೈಲಿಗಿಂತ ಅಂತರಂಗದಲ್ಲಿ ವ್ಯಕ್ತವಾಗುವ ಅನ್ಯ ಭಾವಗಳ ಅಭಿವ್ಯಕ್ತಿ ಆಗಬೇಕು. ಹಾಗಾಗಿ ಕವಯಿತ್ರಿಯರು ಬುದ್ಧಿಭಾವಗಳ ವಿದ್ಯುದಾಲಿಂಗನ ತಂದುಕೊಳ್ಳಬೇಕಾದ ಸವಾಲು ಇದೆ ಎಂದರು.
ಜಾಗತೀಕರಣ: ಜಾಗತೀಕರಣದ ಹೊಸ ಆತಂಕಗಳ ನಡುವೆ ಕವಿತೆಯ ಋಜು ಮಾರ್ಗಗಳನ್ನು ಹುಡುಕಬೇಕಾಗಿದೆ. ಜಾಗತೀಕರಣಕ್ಕೆ ಮುಖಾಮುಖಿ ಆಗಬೇಕಾದ ಸಂದರ್ಭದಲ್ಲಿ ಮುಖ್ಯ ಭೂಮಿಕೆಯಲ್ಲಿ ಚರ್ಚಿಸಬೇಕಾದ ಅವಕಾಶಗಳನ್ನು ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ತಬ್ಬಿಬ್ಬಾದ ಸ್ಥಿತಿಯಲ್ಲಿ ಲೇಖಕರಿದ್ದಾರೆ. ಕ್ಲೀಷೆ ಹೊರತಾದ ತಾಯ್ತನದ ಅಭಿವ್ಯಕ್ತಿಯನ್ನು ಕನ್ನಡ ಲೇಖಕಿಯರು ಕಂಡುಕೊಳ್ಳಬೇಕಾಗಿದೆ ಎಂದರು. ಮಹಿಳಾ ಸಾಹಿತ್ಯ, ಸ್ತ್ರೀ ಸಾಹಿತ್ಯ ಎಂದು ಪ್ರತ್ಯೇಕಿಸುವುದನ್ನು ಕನ್ನಡ ವಿಮರ್ಶಾ ಲೋಕ ಕೈ ಬಿಡಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement