ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಾನವೀಯ ಗುಣ ಮೈಗೂಡಿಸಿಕೊಳ್ಳಿ

Lingaraj Badiger
Updated On : 1 Apr 2013, 11:19 am

ಕಡೂರು: ಏಕಾಗ್ರತೆ ಮತ್ತು ಧಾರ್ಮಿಕ ಭಾವನೆ ಮೂಡಿಸಿ ಮಾನವೀಯ ಗುಣಗಳನ್ನು ಮೈಗೂಡಿಸುಕೊಳ್ಳುವಂತೆ ಪ್ರೇರೇಪಿಸುವಲ್ಲಿ ದೈವತ್ವ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಡಾ.ವೈ.ಸಿ. ವಿಶ್ವನಾಥ್ ಹೇಳಿದರು.
ಕಳಶಾರೋಹಣ: ತಾಲೂಕಿನ ಮಚ್ಚೇರಿ ಕೋಡೀಹಳ್ಳಿಯಲ್ಲಿ (ಗಂಗಾನಗರ)ಶ್ರೀ ಕರಿಯಮ್ಮದೇವಿ ದೇವಾಲಯ ಪ್ರಾರಂಭೋತ್ಸವ ಮತ್ತು ಕಳಶಾರೋಹಣದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಮನುಷ್ಯ ಅಹಂಕಾರ ತ್ಯಜಿಸಿ ಎಲ್ಲರೊಂದಿಗೆ ಉತ್ತಮ ಭಾಂಧವ್ಯ ವೃದ್ಧಿಸಿಕೊಂಡು ಬಾಳುವ ನಿಟ್ಟಿನಲ್ಲಿ ದೇವರ ಹೆಸರಿನಲ್ಲಿ ನಡೆಯುವ ಹಬ್ಬ, ಹರಿದಿನಗಳು, ಜಾತ್ರೆಗಳು ಎಲ್ಲರೂ ಒಂದೆಡೆ ಕಲೆತು ಪರಸ್ಪರ ಜೀವನ ಅರ್ಥೈಸಿಕೊಂಡು ನೆಮ್ಮದಿಯ ಜೀವನ ಮಾಡುವಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಪಾವಿತ್ರ್ಯತೆ: ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ದೇವಾಲಯವನ್ನು ಕಷ್ಟಪಟ್ಟು ಕಟ್ಟುವುದು ದೇವರ ಮೇಲಿರುವ ಭಕ್ತಿ ತೋರಿಸುತ್ತದೆ. ಮುಂದೆ ದೇವಾಲಯವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.
ದೈವತ್ವ: ಬಿಜೆಪಿ ಮುಖಂಡ ಬೀರೂರು ದೇವರಾಜು ಮಾತನಾಡಿದರು. ಜಿಪ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಮನುಷ್ಯನ ಕೆಟ್ಟ ಗುಣವನ್ನು ಹೋಗಲಾಡಿಸಿ ಒಳ್ಳೆಯ ಗುಣ ಕರುಣಿಸುವುದೇ ದೈವತ್ವ ಎಂದರು. ಜಿಪ ಉಪಾಧ್ಯಕ್ಷೆ ಮಾಲಿನಿಬಾಯಿ ರಾಜನಾಯ್ಕ ಮಾತನಾಡಿ, ಊರಿನ ಎಲ್ಲರ ಸಹಕಾರದಿಂದ  ದೇವಾಲಯ ನಿರ್ಮಾಣ ಕೈಗೊಂಡಿರುವುದರಿಂದ ದೇವರ ಕೃಪೆಗೆ ಪಾತ್ರರಾಗಿದ್ದೇವೆ ಎಂದರು.
 ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಗುರುಪೀಠದ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಮಾತನಾಡಿ, ಇಂದಿನ ದಿನಗಳಲ್ಲಿ ಸಂಸ್ಕಾರ ಮತ್ತು ಸಂಪ್ರದಾಯಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಬುದ್ದಿಜೀವಿಯಾಗಿರುವ ಬಗ್ಗೆ ಅಭಿಮಾನ ಹೊಂದುವ ಮೂಲಕ ಧರ್ಮಕಾರ್ಯ ನಡೆಸಿ ಸಮಾಜಕ್ಕೆ ಉಪಕಾರಿಯಾಗಬೇಕು ಎಂದರು. ಕಡೂರು ಯಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶೀ ಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ದೇವರ ಪೂಜೆಯ ನಂತರ ಹಣ್ಣು ಕಾಯಿಯು ಪ್ರಸಾದದ ರೂಪ ತಾಳುವಂತೆ ಮನುಷ್ಯ ದೇವರ ಮೊರೆ ಹೋದಲ್ಲಿ ಸಂಸ್ಕಾರವಂತನಾಗಲು ಸಾಧ್ಯ ಎಂದರು.
 ಜಿಪ ಉಪಾಧ್ಯಕ್ಷೆ ಮಾಲಿನಿಬಾಯಿ, ರಾಜನಾಯ್ಕ, ಜಯಬಾಯಿ, ತೋಟದಮನೆ ಮೋಹನ್, ಕೆ.ಎಂ. ಸೋಮಶೇಖರ್, ಎನ್.ಬಶೀರ್ ಸಾಬ್, ಕೆ.ಎನ್. ಜಯಣ್ಣ, ಗೌಡ ಸೋಮ್ಲಾನಾಯ್ಕ, ಕೆ.ಟಿ. ಕೃಷ್ಣನಾಯ್ಕ, ಗೋವಿಂದನಾಯ್ಕ, ಕೆ.ಎಸ್. ರಮೇಶ್, ಕೆ.ಎನ್. ಬೊಮ್ಮಣ್ಣ, ಬಿ. ಶಿವಪ್ಪ, ಕೃಷ್ಣನಾಯ್ಕ, ಗ್ರಾಪ ಅಧ್ಯಕ್ಷ ಎಂ.ಎಚ್. ಸಿದ್ರಾಮಪ್ಪ, ಉಪಾಧ್ಯಕ್ಷೆ ಗಂಗಮ್ಮ, ಬಾಲಾಜಿನಾಯ್ಕ, ಸಂಪತ್ ನಾಯ್ಕ, ನಾನ್ಯಾನಾಯ್ಕ, ಶಂಕರನಾಯ್ಕ, ಸಕ್ರನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement