ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎರಡನೇ ಬಾರಿಗೆ ಕಡೂರು ದತ್ತು ಪಡೆಯುವುದಾಗಿ ಪುನರುಚ್ಚಾರ

Lingaraj Badiger
Updated On : 2 May 2013, 11:10 am

ಕಡೂರು: ಕ್ಷೇತ್ರದ ಕೆಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟಲ್ಲಿ ಕಡೂರು ಕ್ಷೇತ್ರವನ್ನು ದತ್ತು ಪಡೆಯುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಪಟ್ಟಣದಲ್ಲಿ ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಪರ ಪ್ರಚಾರದಲ್ಲಿ, ಕಳೆದ 2010ರ ಕಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ ವೈ.ಸಿ. ವಿಶ್ವನಾಥ್‌ರನ್ನು ಗೆಲ್ಲಿಸಿಕೊಟ್ಟಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದಂತೆ ಅವರನ್ನು ಗೆಲ್ಲಿಸಿದ ನಂತರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೆ. ನಾನು ಮುಖ್ಯಮಂತ್ರಿಯಾದಾಗ ಕಡೂರು ಬೀರೂರು ಪಟ್ಟಣಗಳ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ 49 ಕೋಟಿರು.ಗಳನ್ನು ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದೆ.
ಹೆಬ್ಬೆ ಯೋಜನೆ ಜಾರಿಗೆ 80 ಕೋಟಿರು. ಮಂಜೂರು ಮಾಡಿದ್ದೇನೆ. ಅಲ್ಲದೆ ಕಡೂರು ವಿಧಾನಸಭಾ ಕ್ಷೇತ್ರ ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾಗಲು ಆದ್ಯತೆ ನೀಡಿದ್ದೇನೆ. ಈ ಭಾರಿ ಮತದಾರರು ಬೆಳ್ಳಿ ಪ್ರಕಾಶ್‌ರನ್ನು ಗೆಲ್ಲಿಸಿ ಕೊಡಬೇಕು.
ಕೆಜೆಪಿ ಸರ್ಕಾರದಿಂದ ಕ್ಷೇತ್ರಕ್ಕೆ ಆಗಬೇಕಿರುವ ಅಭಿವೃದ್ಧಿಯನ್ನು ನಾನು ಕ್ಷೇತ್ರವನ್ನು ದತ್ತು ಪಡೆದು ಬೆಳ್ಳಿ ಪ್ರಕಾಶ್ ಮೂಲಕ ಅಭಿವೃದ್ಧಿಗೊಳಿಸಲು ಕಂಕಣ ಬದ್ದನಾಗಿದ್ದೇನೆ ಎಂದು ಪ್ರಕಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement