ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯ ಕೊರತೆ
ಕ.ಪ್ರ.ವಾರ್ತೆ, ಆಲ್ದೂರು, ಮೇ 1
ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ರಾಮಾಂತರ ಪ್ರದೇಶದಲ್ಲಿ ಮೂಲ ಸೌಲಭ್ಯದ ಕೊರತೆ ಅನಿಭವಿಸುತ್ತಿದ್ದು, ಜನರಲ್ಲಿ ಅಸಮಾಧಾನ ಸ್ಪೋಟ ಬುಗಿಲೆದಿದ್ದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.
ಆಲ್ದೂರು ಸುತ್ತ ಮುತ್ತ ಬುಧವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗೆ ಸೌಜನ್ಯವೂ ಇಲ್ಲ, ಜನರ ಸಮಸ್ಯೆಗೆ ಸ್ಪಂದನೆಯೂ ಇಲ್ಲ, ಚುನಾವಣೆ ಸಮೀಪಿಸುತ್ತಿದೆ ಎಂಬುದನ್ನು ತಿಳಿದು ಕಳೆದ 3 ತಿಂಗಳ ಹಿಂದೆ ಕಾಲೋನಿಗಳಿಗೆ ತೆರಳಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡಿ ಅಲ್ಪ ಸ್ವಲ್ಪ ಅನುದಾನ ಬಿಡುಗಡೆ ಮಾಡಿ ನಾಟಕದ ರಾಜಕಾರಣ ಮಾಡಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಜನರ ವಿರೋಧವಿದೆ ಎಂದರು.
ಎಚ್.ಎಚ್. ದೇವರಾಜ್ ಮಾತನಾಡಿ, ಈಗಾಗಲೆ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿದಿದ್ದು ಬಹುತೇಕ ಹಳ್ಳಿಗಳಲ್ಲಿ ರಸ್ತೆ, ಬೀದಿ ದೀಪ ಕೊರತೆ ಇದೆ. ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಮಾಡಿದ ಭ್ರಷ್ಟಾಚಾರದ ಬಗ್ಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲವನ್ನು ತನಿಖೆ ಮಾಡುವುದಾಗಿ ತಿಳಿಸಿದರು. ಡಿ.ಜೆ. ಸುರೇಶ್, ಲಕ್ಷ್ಮಣ್, ಹೊಲದಗದ್ದೆ ಗಿರೀಶ್, ಎಂ.ಡಿ. ರಮೇಶ್, ವಸ್ತಾರೆ ರವಿ ಇದ್ದರು.