ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಪ್ಪು ಮಾಡುವ ಜನಪ್ರತಿನಿಧಿಗಳಿಗೆ ಚುನಾವಣೆ ಎಚ್ಚರಿಕೆ ಗಂಟೆ

Lingaraj Badiger
Updated On : 2 May 2013, 11:11 am

ಚಿಕ್ಕಮಗಳೂರು: ತಪ್ಪು ಮಾಡುವ ಜನಪ್ರತಿನಿಧಿಗಳಿಗೆ ಈ ಚುನಾವಣೆ ಎಚ್ಚರಿಕೆಯ ಗಂಟೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಹೇಳಿದ್ದಾರೆ. ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಸ್ವಾಗತ ಕೋರಿ ಮಾತನಾಡಿದರು.
ವ್ಯವಸ್ಥೆ ಹಾಳು: ಸಿ.ಟಿ. ರವಿ ಮಾಡಿದ ಭ್ರಷ್ಟಾಚಾರ ಹಾಗೂ ಹಗಲು ದರೋಡೆಗೆ ಜನತೆ ನೀಡುತ್ತಿರುವ ಪ್ರತೀಕಾರದ ಹಾಗೂ ಆಕ್ರೋಶದ ಭಾವನೆ ಬಹಳಷ್ಟು ಸ್ನೇಹಿತರು ಪಕ್ಷ ಸೇರಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು, ಜನರ ಭಾವನೆಗೆ ಧಕ್ಕೆ ತರುವಂತೆ ಯಾವುದೇ ಪಕ್ಷದ ಜನಪ್ರತಿನಿಧಿಯೂ ಕೆಲಸ ಮಾಡಬಾರದು ನಮ್ಮವರೇ ನಾಳೆ ಅಧಿಕಾರಕ್ಕೆ ಬಂದು ತಪ್ಪು ಮಾಡಿದರು ನಾವುಗಳು ಖಂಡಿಸಬೇಕಾಗುತ್ತದೆ. ಇಲ್ಲವಾದರೆ ಜನತಂತ್ರ ವ್ಯವಸ್ಥೆ ಹಾಳಾಗುತ್ತದೆ ಎಂದು ಕಿವಿಮಾತು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ, ಕೆ. ಮಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಮಹೇಶ್ ಗೌಡ, ಪದಾಧಿಕಾರಿಗಳಾದ ಮಲ್ಲೆದೇವರಹಳ್ಳಿ ರಾಜಶೇಖರ್, ಮುಖಂಡರಾದ ಎ.ಎಸ್.ಎಸ್. ಆರಾಧ್ಯ ಉಪಸ್ಥಿತರಿದ್ದರು.

ಕಾಂಗ್ರೆಸ್ ಬೆಂಬಲಿಸಲು ಮನವಿ
ಚಿಕ್ಕಮಗಳೂರು: ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ತಮಗೆ ವೋಟ್ ಮಾಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಮನವಿ ಮಾಡಿದ್ದಾರೆ.  ಕಾರ್ಯಕರ್ತರೊಂದಿಗೆ ಬುಧವಾರ ನಗರದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದ ಅವರು, ಟಿಪ್ಪುನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ನಮ್ಮ ಪಕ್ಷ ಜನಪರವಾದ ಪ್ರಣಾಳಿಕೆಯನ್ನು ನೀಡಿದೆ. ಜನರಿಗೆ ಆಹಾರ ಪದಾರ್ಥಗಳು, ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಎಂದರು.
ನೀರಿನ ಕೊರತೆ: ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವುದಾಗಿ ಬಿಜೆಪಿ ಅಭ್ಯರ್ಥಿ ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ಸಿಬ್ಬಂದಿ ಕೊರತೆ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಕೊರತೆ, ರಸ್ತೆ, ಚರಂಡಿ ಸಮಸ್ಯೆಗಳು ಪರಿಹಾರವಾಗದಿರುವುದು, ಅಭಿವೃದ್ಧಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಜೆಡಿಎಸ್ ತಿರಸ್ಕರಿಸಿ ಎಂದು ಹೇಳಿದರು. ಶಹಬುದ್ದೀನ್ ಮಾತನಾಡಿದರು. ಜಂಷುದ್ದೀನ್, ಜಬ್ಬಿರ್, ಪದ್ಮಾನಂದ್, ಭದ್ರೇಗೌಡ, ರಿಜ್ವಾನ್, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement