ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ

Lingaraj Badiger
Updated On : 2 May 2013, 11:10 am

ಕ.ಪ್ರ.ವಾರ್ತೆ, ನರಸಿಂಹರಾಜಪುರ,  ಮೇ 1
ಶೃಂಗೇರಿ ಕ್ಷೇತ್ರ ವಿಧಾನಸಭೆ ಚುನಾವಣೆಯ ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿ ಜಿ.ಆರ್. ಪೂರ್ಣೇಶ್ ತಮ್ಮ ಬೆಂಗಲಿಗರೊಂದಿಗೆ ಬುಧವಾರ ಪಟ್ಟಣದಲ್ಲಿ ಮನೆ, ಅಂಗಡಿಗಳಿಗೆ ತೆರಳಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯವಾಳಿದ ಕಾಂಗ್ರೆಸ್, ಬಿಜೆಪಿ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ನೀಡಲು ವಿಫಲವಾಗಿದೆ. ಚುನಾವಣೆ ಬಂದಾಗ ಹಣ, ಹೆಂಡ ಹಂಚಿ ಮತ  ಕೊಂಡು ಬಿಡುತ್ತಾರೆ. ಜಾತಿ ರಾಜಕಾರಣ ಮಾಡುತ್ತಾರೆ. ಸ್ವಾಭಿಮಾನ ಕರ್ನಾಟಕಕ್ಕಾಗಿ ಬಿ.ಎಸ್.ಆರ್ ಕಾಂಗ್ರೆಸ್  ಸ್ಥಾಪನೆಯಾಗಿದ್ದು, ರೈತರು, ಬಡವರು ನಮ್ಮ ಪಕ್ಷಕ್ಕೇ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪಕ್ಷದ ಶೃಂಗೇರಿ ಕ್ಷೇತ್ರದ ಕಾರ್ಯದರ್ಶಿ ಚೇತನ್, ಕ್ಷೇತ್ರ ಮಟ್ಟದ ಎಸ್.ಸಿ, ಎಸ್.ಟಿ ಮೋರ್ಚದ ಅಧ್ಯಕ್ಷ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement