ಸಿಗ್ನಲ್‌ಸಿಗದೆ ಬಿಎಸ್ಸೆನ್ನೆಲ್ ಗ್ರಾಹಕರ ಪರದಾಟ
ನರಸಿಂಹರಾಜಪುರ: ಕಾನೂರು ಗ್ರಾಮದ ಗೋಣಿಕೊಪ್ಪ, ಬಂಗವಾನಿ, ವಗಡೆ ಮುಂತಾದ ಹಳ್ಳಿಗಳಿಗೆ ಬಿಎಸ್ಸೆನ್ನೆಲ್ ಮೊಬೈಲ್‌ಗಳಿಗೆ ಸಿಗ್ನಲ್ ಸಿಗದೆ ಸಾವಿರಾರು ಮೊಬೈಲ್ ಗ್ರಾಹಕರು ಪರದಾಡುವಂತಾಗಿದೆ ಎಂದು ಆ ಭಾಗದ ಮೊಬೈಲ್ ಗ್ರಾಹಕರು ದೂರಿದ್ದಾರೆ.
ಈ ಮೂರು ಹಳ್ಳಿಗಳಲ್ಲಿ ಕೆಲವು ವರ್ಷದ ಹಿಂದೆ ಬಿಎಸ್ಸೆನ್ನೆಲ್ ಮೊಬೈಲ್ ಕುದುರೆಗುಂಡಿ ಹಾಗೂ ಬಿ.ಎಚ್. ಕೈಮರದ ಟವರ್‌ನಿಂದ ಸ್ವಲ್ಪ ಸಿಗ್ನಲ್ ಸಿಗುತ್ತಿತ್ತು. ಇದರಿಂದ ಉತ್ತೇಜಿತರಾದ ಗ್ರಾಮಸ್ಥರು ಬಿಎಸ್ಸೆನ್ನೆಲ್ ಸಿಮ್ ಕೊಂಡರು. ಮನೆಗಳಿಗೆ ಬಿಎಸ್ಸೆನ್ನೆಲ್ ಫೋನ್ ಕೂಡಾ ಹಾಕಿಸಿಕೊಂಡರು.
ಕೆಲವು ವರ್ಷಗಳ ನಂತರ ಏಕಾ ಏಕಿ ಸಿಗ್ನಲ್ ಪೂರ್ಣವಾಗಿ ನಿಂತು ಹೋಯಿತು. ಬಿಎಸ್ಸೆನ್ನೆಲ್ ಫೋನ್‌ಗಳಿಗೆ ನೀಡಿದ್ದ ಆಂಟೇನಾ ಸಹ ಉಪಯೋಗಕ್ಕೆ ಬರುತ್ತಿಲ್ಲ. ದರಿಂದ ಮೊಬೈಲ್ ಹಾಗೂ ಫೋನ್ ಇದ್ದರೂ ಪ್ರಯೋಜನ ಇಲ್ಲವಾಗಿದೆ. ಈ ಬಗ್ಗೆ ಬಿಎಸ್ಸೆನ್ನೆಲ್ ಗಮನ ಹರಿಸಬೇಕು ಎಂದು ಈ ಮೂರು ಹಳ್ಳಿಗಳ ಗ್ರಾಹಕರ ಆಗ್ರಹವಾಗಿದೆ.
ರೈತ ಸಂಘದ ಅಧ್ಯಕ್ಷ ರಾಜಿನಾಮೆ
ನರಸಿಂಹರಾಜಪುರ, ಮೇ.1 ಕೆರೆಗದ್ದೆಯ ರೈತ ಸಂಘದ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ಕೆರೆಗದ್ದೆ ರೈತ ಸಂಘದ ಅಧ್ಯಕ್ಷ ಕೆ.ಎಸ್. ಉಮೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮ್ಮೊಂದಿಗೆ ಕೆರೆಗದ್ದೆ ರೈತ ಸಂಘ ಘಟಕದ 9 ಕಾರ್ಯಕರ್ತರೂ ರಾಜಿನಾಮೆ ಸಲ್ಲಿಸಿದ್ದಾರೆ. ನಮ್ಮ ರೈತ ಸಂಘವು ಕೊಪ್ಪ ತಾಲೂಕು ರೈತ ಸಂಘದ ಸಹಯೋಗದೊಂದಿಗೆ ಪ್ರಾರಂಭವಾಗಿತ್ತು. ರೈತರ ಹಿತ ಕಾಪಾಡುವ ದೃಷ್ಟಿಯಿಂದ ರೈತ ಸಂಘ ಪ್ರಾರಂಭವಾಗಿದ್ದು, ನಮ್ಮ ಭಾಗದಲ್ಲಿ ಹಲವು ರೈತ ಪರ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ, ಇತ್ತೀಚಿಗೆ ಕೊಪ್ಪ ತಾಲೂಕು ರೈತ ಸಂಘದ ನಾಯಕ ಸುಧೀರ್ ಕುಮಾರ್ ಮರೊಳ್ಳಿ, ಚಿಂತನ್, ಕರವಾನೆ ನವೀನ್ ಅವರ ವರ್ತನೆ ನಮಗೆ ಬೇಸರ ತಂದಿದೆ.
--