ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಸುಳ್ಳು ದೂರು'

Rashmi Kasaragodu
Updated On : 3 May 2013, 12:42 pm

ಚಿಕ್ಕಮಗಳೂರು: ಹಣ  ಹಂಚುತ್ತಿರುವುದನ್ನು ಖುದ್ದಾಗಿ ಹಿಡಿದು ಕೊಟ್ಟರು ಅವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲು ಮಾಡಿಲ್ಲ. ಪೊಲೀಸ್ ಅಧಿಕಾರಿಗಳು ಒತ್ತಡಕ್ಕೆ ಮಣಿದಿದ್ದಾರೆ. ನಗರಸಭಾ ಸದಸ್ಯ ಹಾಗೂ ಬಿಜೆಪಿಯ ಪ್ರಮುಖ ಕಾರ್ಯಕರ್ತರು ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಸುಳ್ಳು ದೂರು ನೀಡಲಾಗಿದೆ ಎಂದು ಸಚಿವ ಸಿ.ಟಿ. ರವಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀತಿ ಸಂಹಿತೆ ತಂಡ (ಎಂಸಿಸಿ) ತಪಾಸಣೆ ಮಾಡುವ ಮೊದಲೇ ಗಾಯಿತ್ರಿ ಶಾಂತೇಗೌಡ ಅವರು ಬಸವನಹಳ್ಳಿ ಸಬ್ ಇನ್ಸ್‌ಸ್ಪೆಕ್ಟರ್ ಕೈಗೆ ಹಣ ಕೊಟ್ಟಿದ್ದಾರೆ. ಮನೆಯೊಳಗೆ ಅಷ್ಟೋಂದು ಜನ ಇರುವಾಗ ಅತ್ಯಾಚಾರಕ್ಕೆ ಪ್ರಯತ್ನಿಸಿರುವುದು ಹೇಗೆಂದು ಪ್ರಶ್ನಿಸಿದ ರವಿ, ಪಕ್ಷದ  ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ದೂರನ್ನು ಕೂಡಲೇ ಕೈ  ಬಿಡಬೇಕು ಎಂದು ಆಗ್ರಹಿಸಿದರು.
ಮೆಣಸಿನ ಮಲ್ಲೇದೇವರಹಳ್ಳಿ ಜೆಡಿಎಸ್ ಮುಖಂಡ ಎಸ್.ಎಲ್. ಬೋಜೇಗೌಡ ಅವರು ವಿಗ್ರಹ  ಮೇಲೆ ಆಣೆ ಮಾಡಿಸಿ ಜನರಿಗೆ ದುಡ್ಡನ್ನು ಹಂಚಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ. ಈ ಸಂಬಂಧ ದೂರು ನೀಡಿದರೂ ಸಂಬಂಧಿತರನ್ನು ಬಂಧಿಸಿಲ್ಲ. ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸುಳ್ಳು ಆರೋಪ: ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ಗಾಯತ್ರಿ ಶಾಂತೇಗೌಡ ಅವರು ದೂರು ನೀಡಿದ್ದಾರೆ. ಅದು,  ಸುಳ್ಳೆಂದು ನಾವು ಹೇಳುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಆಣೆ ಮಾಡಲು ಧರ್ಮಸ್ಥಳಕ್ಕೆ ಬರಲಿ, ನಾವು ಕೂಡ ಬರುತ್ತೇವೆ. ಜವಬ್ದಾರಿ ಸ್ಥಾನದಲ್ಲಿರುವವರು  ಈ  ರೀತಿಯ ಆರೋಪ ಮಾಡಿರುವುದು ಸರಿಯಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement