ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪತಿಗೆ ಮೂರು ವರ್ಷ ಜೈಲು

Rashmi Kasaragodu
Updated On : 3 May 2013, 1:17 am

ಚಿಕ್ಕಮಗಳೂರು: ಪತ್ನಿಗೆ ನಿರಂತರ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಪತಿಗೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.  ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್‌ನ ಲತಾ ಎಂಬವರನ್ನು ಹಂಪಾಪುರದ ನಿಂಗೇಗೌಡನಿಗೆ ಮದುವೆ ಮಾಡಿಕೊಡಲಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಾವಲುಗಾರನಾಗಿದ್ದ ನಿಂಗೇಗೌಡನು ಪ್ರತಿನಿತ್ಯ ಮದ್ಯಪಾನ ಮಾಡಿ ಪತ್ನಿಗೆ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜಿ ಮಾಡಿಸಲಾಗಿತ್ತು. ಆದರೂ ಈತ ಕಿರುಕುಳ ಮುಂದುವರೆಸಿದ್ದು, 2005ರ ಡಿಸೆಂಬರ್ 21 ರಂದು ಪತ್ನಿಗೆ ಹೊಡೆದು, ಮನೆಯಿಂದ ಹೊರಗೆ ಹಾಕಿ, ಬೆದರಿಕೆ ಹಾಕಿದ್ದನು. ಅಲ್ಲದೆ, ಆ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಲತಾ ತಾಯಿಯ ಮೇಲೆಯೂ ಹಲ್ಲೆ ಮಾಡಿದ್ದನು.  ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ದೋಷಾರೋಪಣೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಾಲು ಜಾರಿಬಿದ್ದು ಬಾಲಕಿ ನೀರುಪಾಲು
ಸಾಗರ: ತಾಲ್ಲೂಕಿನ ಸಿಗಂದೂರು ಕ್ಷೇತ್ರಕ್ಕೆ ಬಂದಿದ್ದ ತುಮಕೂರು ತಾಲ್ಲೂಕಿನ ಗುಗ್ಗಡನ ಹಳ್ಳಿಯ ನಂದಿತಾ (12) ಎಂಬಾಕೆ ಸ್ನಾನ ಮಾಡಲು ಶರಾವತಿ ಹಿನ್ನೀರಿಗೆ ಹೋದಾಗ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ತುಮಕೂರು ತಾಲ್ಲೂಕಿನ ಗುಗ್ಗಡನ ಹಳ್ಳಿಯಿಂದ ಕ್ರೂಸರ್ ವಾಹನದಲ್ಲಿ 14 ಜನ ಭಕ್ತಾದಿಗಳು ಸಿಗಂದೂರು ದೇವಿ ದರ್ಶನಕ್ಕೆ ಬಂದಿದ್ದರು. ಬೆಳಿಗ್ಗೆ ಮೊದಲ ಲಾಂಚಿಗೆ ಹೊಳೆಬಾಗಿಲಿನಿಂದ ಕಳಸವಳ್ಳಿ ದಡಕ್ಕೆ ಬಂದ ಭಕ್ತರು ಶರಾವತಿ ಹಿನ್ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ನಂದಿತಾ ಕಾಲುಜಾರಿ ನೀರು ಪಾಲಾಗಿದ್ದರೆ, ಇನ್ನೋರ್ವ ಬಾಲಕಿ ವರ್ಷತಾ (15) ಮುಳುಗುತ್ತಿದ್ದಾಗ ಸಂದರ್ಭದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯರು ಕೂಗಿಕೊಂಡಿದ್ದರಿಂದ ಸ್ಥಳೀಯರು ಬಂದು ವರ್ಷತಾಳ ಪ್ರಾಣ ಕಾಪಾಡಿದ್ದಾರೆ.
ಕಾಡಾನೆ ಸಾವು
ಕುಶಾಲನಗರ: ಕೊಪ್ಪ ಗ್ರಾಮದ ಸಮೀಪ ದೊಡ್ಡಹರವೆ ಮೀಸಲು ಅರಣ್ಯದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಪಿರಿಯಾಪಟ್ಟಣ ಅರಣ್ಯ ವಲಯದಲ್ಲಿರುವ ಅಂದಾಜು 12 ವರ್ಷ ಪ್ರಾಯದ ಗಂಡಾನೆ ನಿತ್ರಾಣಗೊಂಡು ಮೃತಪಟ್ಟಿದೆ. ಎಂದು ಪಿರಿಯಾಪಟ್ಟಣ ಅರಣ್ಯ ವಲಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement