ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತಗಟ್ಟೆಯಲ್ಲಿ ವೆಬ್ಕಾಸ್ಟ್ ಸೆಂಟರ್

Lingaraj Badiger
Updated On : 4 May 2013, 11:35 am

ಚಿಕ್ಕಮಗಳೂರು ಮೇ 3
ಅತಿಸೂಕ್ಷ್ಮ ಮತಗಟ್ಟೆಗಳ ಮೇಲೆ ಕಣ್ಣಿಡಲು ಚುನಾವಣಾ ಆಯೋಗ ವೆಬ್ಕಾಸ್ಟ್ ಸೆಂಟರ್ ತೆರೆಯುತ್ತಿದೆ. ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಮತಗಟ್ಟೆ ಅಧಿಕಾರಿಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ತರಬೇತುಗೊಳಿಸಲಾಗಿದೆ.
     ವೆಬ್ ಸಂಪರ್ಕಕ್ಕೆ ಆಯ್ಕೆ ಮಾಡಿಕೊಂಡಿರುವ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಸಹಾಯಕ ಚುನಾವಣಾಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಶನಿವಾರ ತರಬೇತುಗೊಳಿಸಲಾಗುವುದು.
   ಮೇ 5ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5.30ರವರೆಗೆ ಈ ವೆಬ್ಕಾಸ್ಟ್ ಸೆಂಟರ್ಗಳು ನಿರಂತರವಾಗಿ ಕಾರ್ಯನಿರ್ವಹಿಸಲಿವೆ.
  ಇದರ ಮೂಲ ಉದ್ದೇಶ- ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ನಡೆಯುವ ವೇಳೆ ಯಾವುದೇ ಅಡಚಣೆಯಾಗಬಾರದು ಎಂದು. ಹಾಗೇನಾದರೂ ಆದಲ್ಲಿ ತಕ್ಷಣವೇ ಸ್ಪಂದಿಸಲು ಅನುಕೂಲವಾಗುವಂತೆ ಈ ಕೇಂದ್ರ ಸಹಕರಿಸಲಿದೆ.
ವೆಬ್ಕಾಸ್ಟ್ ಸೆಂಟರ್: ರಾಜ್ಯದಲ್ಲಿ ಈಗಾಗಲೇ ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳ ಪೈಕಿ ಈ ವರ್ಷ ಪ್ರಾಯೋಗಿಕವಾಗಿ 900 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇವುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 12 ಮತಗಟ್ಟೆಗಳಿವೆ.
  ಆ ಮತಗಟ್ಟೆಗಳಲ್ಲಿ ಮತದಾನದ ಎಲ್ಲ ಮಾಹಿತಿಗಳನ್ನೂ ನೇರವಾಗಿ ವೆಬ್ಸೈಟ್ ಮೂಲಕ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕುಳಿತು ನೋಡಬಹುದು. ಜತೆಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೇಂದ್ರ ಹಾಗೂ ರಾಜ್ಯ ಚುನಾವಣಾ ವೀಕ್ಷಕರು ನೋಡಬಹುದು.
  ಆ ಕೇಂದ್ರಗಳ ವಿವರಣೆಯನ್ನು ಬರೀ ನೋಡುವುದಕಷ್ಟೇ ಅಲ್ಲ. ಮತದಾನ ಆರಂಭಗೊಂಡು, ಮುಗಿಯುವವರೆಗೂ ಚಿತ್ರೀಕರಣವಾದ ಮಾಹಿತಿಯನ್ನು ಸಂಗ್ರಹಿಸಿಡಲಾಗುವುದು. ಅವಶ್ಯವಿದ್ದಲ್ಲಿ ಅದನ್ನೂ ಬಳಸಿಕೊಳ್ಳಬಹುದು.
ಪ್ರಾಯೋಗಿಕ ಯತ್ನ: ಪ್ರಾಯೋಗಿಕ ಪ್ರಯತ್ನದಲ್ಲಿ ವಿಫಲವಾಗಬಾರದೆಂಬ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗ ರಾಜ್ಯ ಚುನಾವಣಾ ಇಂಟರ್ನೆಟ್ ಸಂಪರ್ಕ ಸುಲಭವಾಗಿ ಸಿಗುವಂಥ ಮತಗಟ್ಟೆಗಳನ್ನು ಆರಿಸಿಕೊಂಡಿದ್ದು, ಅವುಗಳಲ್ಲಿ ಹೆಚ್ಚಿನವು ಗ್ರಾಮಾಂತರ ಪ್ರದೇಶಗಳಲ್ಲಿವೆ.
  ಇಂಥ ಕೇಂದ್ರಗಳಲ್ಲಿ ಲ್ಯಾಪ್ಟಾಪ್ ಬಳಸಿಕೊಳ್ಳಲಾಗುವುದು. ಇಂಟರ್ನೆಟ್ ಸಂಪರ್ಕ ಇಲ್ಲದಿರುವೆಡೆ ಡಾಟಾ ಕಾರ್ಡ್ ಬಳಸುವಂತೆ
   ಚುನಾವಣಾ ಆಯೋಗ ಸೂಚಿಸಿದೆ. ಆದರೆ, ಕೆಲವೆಡೆ ಸಂಪರ್ಕ ಸಿಗುವುದಿಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ ಮೇರೆಗೆ ಬಿಎಸ್ಎನ್ಎಲ್ನ ಬ್ರಾಡ್ಬ್ಯಾಂಡ್ ಸಂಪರ್ಕ ಪಡೆಯುವಂತೆ ಆಯೋಗ ತಿಳಿಸಿದೆ. ಈ ಸಂಬಂಧ ಕೆಲಸ ನಿರಂತರವಾಗಿ ಸಾಗುತ್ತಿದೆ.
 -ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement