ಶ್ರೀರಾಮುಲು ಜನಪರ ಕಾಳಜಿಯೇ ಗೆಲವಿಗೆ ಶ್ರೀರಕ್ಷೆ
ಕ.ಪ್ರ.ವಾರ್ತೆ, ಕಡೂರು, ಮೇ.3
ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿಯವರ ಜಾತ್ಯತೀತ ನಿಲುವಿನ ರಾಜಕಾರಣದಿಂದ ಕಡೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧನೆ ಮತ್ತು ಶ್ರೀರಾಮುಲುರವರ ಜನಪರ ಕಾಳಜಿಯು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಆರ್. ಕಾಂಗ್ರೆಸ್ ಗೆಲುವು ಸಾಧಿಸಲು ಕಾರಣವಾಗಲಿದೆ ಎಂದು ಪಕ್ಷದ ಅಭ್ಯರ್ಥಿ ಕೆ.ಎಂ. ಕೆಂಪರಾಜು ಹೇಳಿದರು.
ಕಡೂರು ಪಟ್ಟಣದ ಒಂದನೇ ವಾರ್ಡಿನಲ್ಲಿ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದ ಮಾತನಾಡಿದ ಅವರು, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಸಹೋದರರಾದ ಶಾಸಕ ದಿ.ಕೆ.ಎಂ. ಕೃಷ್ಣಮೂರ್ತಿಯವರು 16 ವರ್ಷ ಕಡೂರು ಕ್ಷೇತ್ರದ ಶಾಸಕರಾಗಿ ಕಡೂರು ತಾಲೂಕು ಕೇಂದ್ರಕ್ಕೆ ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕ್ಕೋತ್ತರ ಕೇಂದ್ರ ತರುವ ಮೂಲಕ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿದರು ಎಂದವರು ಹೇಳಿದರು.
ಕ್ಷೇತ್ರದ ಮತದಾರರು ಬಿ.ಎಸ್.ಆರ್.ಕಾಂಗ್ರಸ್ಗೆ ಮತ ನೀಡುವ ಮೂಲಕ ನನಗೆ ಆಶೀರ್ವದಿಸಬೇಕು ಎಂದು ಕೆಂಪರಾಜು ಕೋರಿದರು. ಬಿ.ಎಸ್.ಆರ್. ಕಾಂಗ್ರೆಸ್ ಮುಖಂಡ ಹಿರೇನಲ್ಲೂರು ಕಲ್ಲೇಶ್, ಸಿಂಗಟಗೆರೆ ರಮೇಶ್, ಚಂದ್ರು, ಮಂಜುನಾಥ್, ಶ್ರೀನಿವಾಸ್, ಚಂದ್ರು, ಮಂಜು, ಬಸವರಾಜು ಉಪಸ್ಥಿತರಿದ್ದರು.