ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುಸೂತ್ರ ಚುನಾವಣೆಗೆ ಸಕಲ ಸಿದ್ಧತೆ

Vishwanath S
Updated On : 5 May 2013, 1:18 am

ಕ.ಪ್ರ.ವಾರ್ತೆ  ,  ನರಸಿಂಹರಾಜಪುರ  ,   ಮೇ 4
ಭಾನುವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲಾ ಸಿದ್ಧತೆ  ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಜಿ.ಕೆ. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನಲ್ಲಿ ಖಾಂಡ್ಯ ಹೋಬಳಿ ಸೇರಿ ಒಟ್ಟು 94 ಮತಗಟ್ಟೆಗಳಿದ್ದು, 60,196 ಮತದಾರರಿದ್ದಾರೆ. ಇವರಲ್ಲಿ 30,096 ಪುರುಷ ಮತದಾರರು ಹಾಗೂ 30,100 ಮಹಿಳೆ ಮತದಾರರಿದ್ದಾರೆ. 46 ಸೂಕ್ಷ್ಮ, 31 ಅತಿ ಸೂಕ್ಷ್ಮ ಹಾಗೂ 17 ಸಾಮಾನ್ಯ ಮತಗಟ್ಟೆ ಎಂದು ಗುರುತಿಸಲಾಗಿದೆ. ಮತದಾನ ಸಿಬ್ಬಂದಿ ಆಯಾ ಮತಗಟ್ಟೆಗೆ ಕಳಿಸಲಾಗಿದೆ.
ಬೆ.7 ರಿಂದ ಸಂಜೆ 6 ರ ವರೆಗೆ: ಈ ಹಿಂದೆ ಚುನಾವಣೆಯ ಸಮಯವು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ನಿಗದಿಯಾಗಿತ್ತು. ಈಗ ಚುನಾವಣಾ ಆಯೋಗದ ಹೊಸ ಆದೇಶದಂತೆ ಬೆಳ್ಗಗೆ 7 ರಿಂದ ಸಂಜೆ 6 ವರೆಗೆ ಚುನಾವಣೆ ನಡೆಸಲಾಗುತ್ತದೆ. ಸತತ 11 ಗಂಟೆ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಿಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ತಾಲೂಕು ವ್ಯಾಪ್ತಿಯ 92 ಮತಗಟ್ಟೆಗೆ 92 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. 50 ಗಡಿಭದ್ರತಾ ಪಡೆಯವರು ಕ್ವಿಕ್ ಆಕ್ಷನ್ ವಾಹನದಲ್ಲಿ ಸಂಚಾರ ಮಾಡಲಿದ್ದು, ಅಗತ್ಯವಿರುವ ಭಾಗಕ್ಕೆ ಆಗಮಿಸಲಿದ್ದಾರೆ.
ಎಸ್.ಐ ಹಾಗೂ ಎ.ಎಸ್.ಐ ಸೇರಿ 11 ಪೊಲೀಸ್ ಇನ್ಸ್‌ಪೆಕ್ಟರ್ ಅಧಿಕಾರಿಗಳು ಸಹ ಭದ್ರತೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚು ಭದ್ರತೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement