ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆನೆ ದಾಳಿ: ಸ್ಥಳದಲ್ಲೇ ವ್ಯಕ್ತಿ ಸಾವು

Lingaraj Badiger
Updated On : 6 May 2013, 11:08 am

ಕ.ಪ್ರ.ವಾರ್ತೆ, ಮೂಡಿಗೆರೆ,  ಮೇ 5
ಹಾಲು ಹಾಕಲು ಹೋಗುತ್ತಿದ್ದ ವ್ಯಕ್ತಿಯೊಬ್ಬ ಒಂಟಿ ಸಲಗದ ದಾಳಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪಿದ ಘಟನೆ ತಾಲೂಕಿನ ಬಣಕಲ್ ಹೋಬಳಿಯ ಫಲ್ಗುಣಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ನಮೀದ್ ನಜೀರ್ (55) ಮೃತ ವ್ಯಕ್ತಿ. ನಮೀದ್ ನಜೀರ್ ಎಂದಿನಂತೆ ಬೆಳಗ್ಗೆ 6.20ಕ್ಕೆ ಗ್ರಾಮದ ಕೆಲವು ಮನೆಗೆ ಹಾಲು ಹಾಕಿ, ಮತ ಚಲಾಯಿಸಿ ಬರುವುದಾಗಿ ಕುಟುಂಬದ ಸದಸ್ಯರಿಗೆ ತಿಳಿಸಿ ಮನೆಯಿಂದ ಹೊರಟಿದ್ದರು.
ಸ್ವಲ್ಪ ದೂರ ಹೋಗುತ್ತಿದ್ದಂತೆ ಫಲ್ಗುಣಿಯ ಕಲಾನಾಥೇಶ್ವರ ದೇವಾಲಯದ ಕಡೆಯಿಂದ ಆಗಮಿಸಿದ ಒಂಟಿ ಸಲಗ. ಎದುರಿಗೆ ಸಿಕ್ಕ ನಮೀದ್ ನಜೀರ್ ಅವರನ್ನು ಎತ್ತಿ ಎಸೆದು, ತುಳಿದು ಹಾಕಿದ್ದರಿಂದ ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ನಂತರ ಅವರ ಶವದ ಮೇಲೆ ಮರವೊಂದನ್ನು ತಂದು ಹಾಕಿದ ಸಲಗ ಕಾಡಿನ ಕಡೆ ಹೊರಟು ಹೋಗಿದೆ.
ಗ್ರಾಮಕ್ಕೆ ಆಗಮಿಸಿದ ಒಂಟಿ ಸಲಗ. ಎಂ.ಆರ್.ಹರ್ಷ ಮತ್ತು ಒ.ಎಸ್. ಗೋಪಾಲಗೌಡರ ತೋಟದ ಗೇಟುಗಳನ್ನು ಕೆಡವಿಹಾಕಿದ್ದು. ಬೆಳೆ ನಾಶ ಪಡಿಸಿದೆ.
ಸಾರ್ವಜನಿಕರಿಂದ ಪ್ರತಿಭಟನೆ: ತಾಲೂಕಿನ ಬಣಕಲ್ ಹೋಬಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂಟಿಸಲಗದ ಹಾವಳಿ ಅತಿಯಾಗಿದ್ದು, ಆನೆ ಹಾವಳಿಯಿಂದ ಶಾಶ್ವತ ಪರಿಹಾರ ಹಾಗೂ ಮೃತ ನಮೀದ್ ನಜೀರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಅಧಿಕಾರಿಗಳು ಆಗಮಿಸಿ ಮೃತ ಕುಟುಂಬಕ್ಕೆ ರು. 5,000 ವಿತರಿಸಿದರು. ಹಾಗೂ ಮೃತ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಜಿಲ್ಲಾ ಅರಣ್ಯಾಧಿಕಾರಿ ವೆಂಕಟೇಶ್, ಜಿಲ್ಲಾಧಿಕಾರಿ ವಿ. ಯಶವಂತ್, ವೃತ್ತ ನಿರೀಕ್ಷಕ ರಮೇಶ್, ಠಾಣಾಧಿಕಾರಿ ಹೊಸ್ಕೇರಪ್ಪ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಹರೀಶ್ ಬಾಬು, ವಲಯರಣ್ಯಾಧಿಕಾರಿ ಸುದರ್ಶನ್ ಸೇರಿದಂತೆ ಅಧಿಕಾರಿಗಳು ಆಗಮಿಸಿದ್ದರು.
ಗ್ರಾಮಸ್ಥರಲ್ಲಿ ಆತಂಕ: ಕಳೆದ 6-7 ತಿಂಗಳ ಹಿಂದೆ ಒಂಟಿ ಸಲಗವೊಂದು ಕಡೂರು- ಮಂಗಳೂರು ಮುಖ್ಯ ರಸ್ತೆಯಲ್ಲಿರುವ ಬಗ್ಗಸಗೋಡು ಎಂಬಲ್ಲಿ ಬೆಳಗ್ಗೆ 9ರ ಸುಮಾರಿಗೆ  ಕೂಲಿ ಕಾರ್ಮಿಕರಾದ ಕಮಲ ಎಂಬಾಕೆಯನ್ನು ಎತ್ತಿ ಎಸೆದು, ಸಬ್ಬೇನಹಳ್ಳಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನೂ ಎಸೆದಿತ್ತು. ಪರಿಣಾಮ ಒಬ್ಬನ ಕಾಲು ಮುರಿದು ಹೋಗಿದ್ದು. ಕಮಲಳ ಪರಿಸ್ಥಿತಿ ಚಿಂತಾಜನಕವಾಗಿತ್ತು.
ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ. ಭಾನುವಾರ ಬೆಳಗ್ಗೆ ಈ ನಡೆದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಕಳ್ಳಬಟ್ಟಿ ದಂಧೆ: ಬಣಕಲ್ ಹೋಬಳಿಯ ಸುತ್ತ ಮುತ್ತಲಿನ ಕೆಲವು ಗ್ರಾಮಗಳಲ್ಲಿ ಕಳ್ಳಬಟ್ಟಿ ದಂಧೆ ಹೆಚ್ಚಾಗಿ ನಡೆಯುತ್ತಿದ್ದು. ಕಳ್ಳಬಟ್ಟಿ ವಾಸನೆ ಹಿಡಿದ ಆನೆಗಳು ಗ್ರಾಮದತ್ತ ಲಗ್ಗೆ ಹಾಕುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ  ಆನೆಗಳ ಹಾವಳಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕರವೇ ಗೌರವಾಧ್ಯಕ್ಷ ಹೊರಟ್ಟಿ ರಘು ಪತ್ರಿಕೆಯೊಂದಿಗೆ ಮಾತನಾಡಿ, ಕಾಡಿನಲ್ಲಿ ಬಿದಿರು, ಬೈನೆ, ಹಲಸಿನ ಮರಗಳನ್ನು ಬೆಳೆಸುವ ಬದಲು ಬೇಡವಾದ ಅಕೇಶಿಯ ಮರಗಳನ್ನು ಬೆಳೆಯುತ್ತಿದ್ದಾರೆ.
ಇದರಿಂದ ಆನೆ ಸೇರಿದಂತೆ ಇತರೆ ಪ್ರಾಣಿಗಳಿಗೆ ಆಹಾರವೇ ಇಲ್ಲದಂತಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement