ಬಿಗಿ ಬಂದೋಬಸ್ತ್ ನಡುವೆ ಮತದಾನ
ಶಿರಾಳಕೊಪ್ಪ: ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚುನಾವಣೆ ಶಾಂತ ರೀತಿಯಿಂದ ನಡೆಯಿತು.
ಚುನಾವಣಾ ಆಯೋಗದ ಬಿಗಿ ನಿರ್ಧಾರದಿಂದ ಈ ಹಿಂದೆ ಒಂದಿಲ್ಲ ಒಂದು ಕಾರಣಕ್ಕೆ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಕೆಲಭಾಗದಲ್ಲಿ ಪ್ರತಿ ಚುನಾವಣೆಯಲ್ಲಿ ನಡೆಯುತ್ತಿದ್ದ ಗಲಾಟೆಗಳು ಈ ಬಾರಿ ನಡೆಯದೇ ಶಾಂತರೀತಿಯಿಂದ ಮತದಾನ ನಡೆದಿರುವದು ಈ ಭಾಗದ ಮತದಾರರಿಗೆ ನೆಮ್ಮದಿ ತಂದಿದೆ.
ಹೆಸರು ನಾಪತ್ತೆ: ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಈ ಹಿಂದೆ ನಡೆದಂತೆ ಮತಪಟ್ಟಿಯಲ್ಲಿ ಹೆಸರು ನಾಪತ್ತೆಯ ಪ್ರಕಣಗಳು ಸಾಕಷ್ಟು ಕೇಳಿ ಬಂದಿವೆ. ಮತದಾರಪಟ್ಟಿಯಲ್ಲಿ ಹೆಸರು ಮತ್ತು ಪೋಟೋ ಅದಲು ಬದಲು ಸಾಕಷ್ಟ ಗೊಂದಲಕ್ಕೆ ಕಾರಣವಾಗಿದ್ದರೂ ಮತದಾನಕ್ಕೆ ತೊಂದರೆ ಆಗಲಿಲ್ಲ. ಶಿರಾಳಕೊಪ್ಪ ಪಟ್ಟಣದಲ್ಲಿ ಕೆಲವು ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಈ ಹಿಂದೆ ಗುರುತಿಸಲಾಗಿತ್ತು, ಅಂತಹ ಮತಗಟ್ಟೆಗಳಲ್ಲಿ ಬಿಗಿ ಪೋಲೀಸ್ಬ್ಂದೋಬಸ್ತ ಜೊತೆಗೆ ಅರೆಸೇನಾಪಡೆ ಹಾಕಲಾಗಿತ್ತು. ಮತದಾರರನ್ನು ಬಿಟ್ಟು ಇತರರನ್ನು ಹತ್ತಿರ ನಿಲ್ಲದಂತೆ ಹಾಗು ಗುಂಪುಸೇರದಂತೆ ಸ್ಥಳೀಯ ಪೋಲೀಸರು ಎಚ್ಚರಿಕೆ ವಹಿಸಿದ ಕಾರಣ ಯಾವದೇ ಅಹಿತಕರ ಘಟನೆಗೆ ಆಸ್ಪದವಿರಲಿಲ್ಲ.