ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯುತ್ ಉತ್ಪಾದನೆಗೆ ಆದ್ಯತೆ: ಡಾ. ಅನಂತ್

Lingaraj Badiger
Updated On : 6 May 2013, 10:58 am

ಚಿಕ್ಕಮಗಳೂರು: ಗಾಳಿ, ನೀರು, ಬೆಳಕು ಹೇಗೆ ಅವಶ್ಯಕವೋ ಹಾಗೆಯೇ ವಿದ್ಯುತ್‌ಶಕ್ತಿ ಎಲ್ಲಾ ಚಟುವಟಿಕೆಗಳಿಗೂ ಮೂಲ. ಹಾಗಾಗಿ ವಿದ್ಯುತ್‌ಶಕ್ತಿಯಿಂದಲೇ ದೇಶದ ಅಭಿವೃದ್ಧಿ ಎಂದು ಮೈಸೂರಿನ ಎನ್‌ಐಇ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಟಿ. ಅನಂತ ಪದ್ಮನಾಭ ಅವರು ಹೇಳಿದ್ದಾರೆ.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ವಿಭಾಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ತಾಂತ್ರಿಕ ಪ್ರಬಂಧ ಮಂಡನಾ ಸಮಾವೇಶ ಈ ಬೆಳಕು-13 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವುದು ವಿದ್ಯುತ್ ಗುರುತ್ವಶಕ್ತಿ ಹಾಗಾಗಿ ವಿದ್ಯುತ್‌ಗೆ ಹೆಚ್ಚಿನ ಮಹತ್ವ. ವಿದ್ಯುತ್ ವಿಭಾಗವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳು ದೇಶದಲ್ಲಿಯೇ ಅತ್ಯುತ್ತಮ ಎಂದರು.
ಭಾರತದಲ್ಲಿ ವಿದ್ಯುತ್‌ಶಕ್ತಿಯ ಉತ್ಪಾದನಾ ಅಭಿವೃದ್ಧಿ ಹೆಚ್ಚಾಗಿ ಆಗದಿರುವುದು ಹೆಚ್ಚಿನ ಸಮಸ್ಯೆಗೆ ಕಾರಣ. 2030ರ ವೇಳೆಗೆ 20 ಲಕ್ಷ ಮೆಗಾವ್ಯಾಟ್‌ಗಳ ಅವಶ್ಯಕತೆ ಇದೆ. ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement