12ರಂದು ನೆಮ್ಮಾರು ಉರೂಸ್
ಶೃಂಗೇರಿ: ನೆಮ್ಮಾರು ಸೂಫಿ ಸಂತ ಹಜರತ ದಿಲಾವರುಷ ಔಲಿಯಾ ದರ್ಗಾದಲ್ಲಿ ವಿಶೇಷ ಉರೂಸ್ 12 ರಂದು ನಡೆಯಲಿದೆ. ಉರೂಸ್ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ದಾವತ್-ಇ-ಇಸ್ಲಾಮಿ ತಂಡದವರಿಂದ ದಾರ್ಮಿಕ ಮತಪ್ರಸಂಗ, ಉರೂಸ್ ನಡೆದು ಬಂದ ದಾರಿ, ಆಚರಣೆಗಳ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಸಂಜೆ 5 ಗಂಟೆಗೆ ದರ್ಗಾದ ಮುಂಬಾಗದಿಂದ ಸಂದಲ್ ಮೆರವಣಿಗೆ ಹೊರಡಲಿದೆ. ಶಿವಮೊಗ್ಗದ ಜನಾಬ್ ಅಬ್ದುಲ್ ರಝಾಕ್ ತಂಡದವರ ಆಕರ್ಷಕ ಝರಬ್ ಕಾರ್ಯಕ್ರಮದೊಂದಿಗೆ ಸಂದಲ್ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಲಿದೆ. ನಂತರ ದರ್ಗಾದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
--