ಆಟೋ ಪಲ್ಟಿ: ಮೂವರಿಗೆ ಗಾಯ
ಕೊಪ್ಪ: ತಾಲೂಕಿನ ಗುಣವಂತೆ ರಸ್ತೆಯ ಬಳಿಯಲ್ಲಿರುವ ಸೇತುವೆ ಹತ್ತಿರ ಆಟೋ ಪಲ್ಟಿಯಾದ ಪರಿಣಾಮ 3 ಜನರಿಗೆ ತ್ರೀವ್ರ ಪೆಟ್ಟು ಬಿದ್ದು ಮೂಳೆ ಮೂರಿತಕ್ಕೆ ಒಳಗಾದ ಘಟನೆ ಸೋಮವಾರ ಸಂಭವಿಸಿದೆ.
ಕುಂದಾಪುರ ಮೂಲದ ರಜಾಕ್ ಮತ್ತು ಮನೆಯವರು ಗುಣವಂತೆ ಸಂಬಂಧಿಕರ ಮನೆಯಿಂದ ಬಸ್‌ಸ್ಟಾಂಡ್‌ಗೆ ಆಟೋದಲ್ಲಿ ಹಿಂತಿರುವಾಗ ಆಟೋ ಪಲ್ಟಿಯಾದ್ದರಿಂದ ರಜಾಕ್, ಶಂಶುದ್ದಿನ್, ಸಾಯಿದಾ ಬಾನುರವರಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಗಾಯಾಳುಗಳ ತೀರ್ಥಹಳ್ಳಿಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್‌ರೆ ಇದ್ದರೂ ಕೂಡ ಖಾಸಗಿಯಲ್ಲಿ ಎಕ್ಸ್‌ರೇ ತೆಗೆಸಿಕೊಂಡು ಬರುವಂತೆ ಗಾಯಾಳುಗಳಿಗೆ ಕಳಿಸಿದ್ದಕ್ಕೆ ಆಸ್ಪತ್ರೆಯಲ್ಲಿ ಸೇರಿದ್ದ ಸಾರ್ವಜನಿಕರು ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣ ದಾಖಲಾಗಿದೆ.
ಬೈಕ್ ಬಸ್ ಡಿಕ್ಕಿ: ಗಾಯ
ಶೃಂಗೇರಿ: ಮಂಗಳೂರು ಶಿವಮೊಗ್ಗ ರಾ.ಹೆ.13 ರ ನೆಮ್ಮಾರು ಬಳಿ ಬಸ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರ ಗಂಬೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಬೈಕ್‌ಗೆ ಬಸ್ ಅಪ್ಪಳಿಸಿದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಗುರುಳಿ ಬಿದ್ದ ಸವಾರ ಗೋಪಾಲ ತೀವ್ರ ಗಾಯಗೊಂಡಿರುತ್ತಾನೆ. ಆತನನ್ನು ಚಿಕಿತ್ಸೆಗಾಗಿ ಶೃಂಗೇರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದೆ.