ಬಿಜಿಎಸ್ ಆಂಗ್ಲ ಶಾಲೆಗೆ ಶೇ.100ರಷ್ಟು ಫಲಿತಾಂಶ
ಕ.ಪ್ರ.ವಾರ್ತೆ, ಕಡೂರು, ಮೇ 6
ಕಡೂರು ಪಟ್ಟಣದ ಬಿಜಿಎಸ್ ವಿದ್ಯಾಸಂಸ್ಥೆಯ ಬಿಜಿಎಸ್ ಆಂಗ್ಲ ಮಾಧ್ಯಮ ಫ್ರೌಢಶಾಲೆಗೆ ಈ ಭಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದೊರಕಿ ಮೂವರು ಗ್ರಾಮಾಂತರ ವಿದ್ಯಾರ್ಥಿಗಳು ಸೇರಿದಂತೆ 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ಕಡೂರಿನ ಸಂದೀಪ್ 596 (ಶೇ. 95.2),ಬಿಳುವಾಲ ಗ್ರಾಮದ ರಮ್ಯ 591 (ಶೇ. 94.56), ಕಡೂರಿನ ಎಂ.ಪಿ. ನಮ್ಯ 587 (ಶೇ 93.92), ಕಡೂರಿನ ಸುರೇಶಕುಮಾರ್ 569 (ಶೇ. 91.04), ಜಿ. ಮಾದಾಪುರದ ಡಯಾನ 567 (ಶೇ. 90.72), ಉಡುಗೆರೆಯ ಗಗನ್ ದೀಪ್ 564 (ಶೇ. 90.24), ಕಡೂರಿನ ಎಸ್. ಮೇಘನಾ 560 (ಶೇ. 89.6), ಕಡೂರಿನ ಎಂ. ಪೂಜಾ 548 (ಶೇ. 87.68), ಮತ್ತು ಕಡೂರಿನ ಕೆ.ಎಸ್. ಮನೋಜ್ 543 (ಶೇ. 86.88) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾಗಿದ್ದಾರೆ.
9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ: ಈ ಬಗ್ಗೆ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಫ್ರೌಢಶಾಲೆ ಮತ್ತು ಕಾಲೇಜು ವಿಭಾಗದ ಮುಖ್ಯಸ್ಥರಾದ ಹೆಚ್.ಸಿ. ಸುಮಿತ್ರರವರು ಫಲಿತಾಂಶದ ಕುರಿತು ವಿವರ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತಿದ್ದ ಒಟ್ಟು 52 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 33 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯು ಕಡೂರು ಪಟ್ಟಣದಲ್ಲಿ 2010 ರಲ್ಲಿ ಆರಂಭವಾಗಿದ್ದು ಇದೇ ಮೊದಲ ಭಾರಿಗೆ ಶಾಲೆಯ ಎಸ್‌ಎಸ್‌ಎಲ್‌ಸಿ ಬ್ಯಾಚ್ ತಂಡವು ಪರೀಕ್ಷೆ ಎದುರಿಸುವ ಮೂಲಕ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಬರಲು ಕಾರಣರಾಗಿದ್ದಾರೆ ಎಂದರು.
ಫಲಿತಾಂಶದಿಂದ ಹರ್ಷಗೊಂಡಿರುವ ಆದಿಚುಂಚನಗಿರಿಯ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿಯವರು ಉತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲ ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಭೋಧಕ ವರ್ಗ ಮತ್ತು ಭೋಧಕೇತರ ವರ್ಗವನ್ನು ಅಭಿನಂದಿಸಿದ್ದಾರೆ.
ಉತ್ತಮ ಫಲಿತಾಂಶ ತಂದಿರುವ ಮಕ್ಕಳು ಮುಂದೆಯೂ ಕೂಡ ಉತ್ತಮವಾಗಿ ವ್ಯಾಸಾಂಗ ಮಾಡಿ ಉತ್ತಮ ಫಲಿತಾಂಶ ತರುವ ಮೂಲಕ ತಾವು ಓದಿದ ಶಾಲಾ ಕಾಲೇಜು ಮತ್ತು ಪೋಷಕರಿಗೂ ಅಧ್ಯಾಪಕರಿಗೂ ಊರಿಗೂ ಕೀರ್ತಿ ತರುವ ನಿಟ್ಟಿನಲ್ಲಿ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ.