ಯೋಗದಿಂದ ಸದೃಢ ಮನಸ್ಸು
ತರೀಕೆರೆ: ಯೋಗ ಸಾಧನೆಯಿಂದ ಮಾನಸಿಕ ಮತ್ತು ಶಾರೀರಕ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದು ಪಟ್ಟಣದ ಎಸ್ಜೆಎಂ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ವಿ. ಸಜ್ಜನಶೆಟ್ಟರ್ ತಿಳಿಸಿದ್ದಾರೆ.
ಕಾಲೇಜಿನ ಎಸ್ಎಸ್ಎಸ್ಯಿಂದ ನೆಡದ 7 ದಿನಗಳ ಉಚಿತ ಯೋಗಾಸನ ತರಬೇತಿ ಶಿಬಿರದ ಸಮಾರೋಪದ ಅಧ್ಯಕ್ಷತೆ ವಹಿಸಿ
ಮಾತನಾಡಿ, ದುಡ್ಡು ಕೊಟ್ಟು ಮಾತ್ರೆ ಕೊಳ್ಳಬಹುದು, ಆದರೆ ಆರೋಗ್ಯ ಕೊಳ್ಳುವ ವಸ್ತು ಅಲ್ಲ, ದುಡ್ಡು ಕೊಟ್ಟು ಹಾಸಿಗೆ ಕೊಳ್ಳಬಹುದು, ಆದರೆ ನಿದ್ರೆ ಹಾಗಾಗುವುದಿಲ್ಲ, ಸುಂದರವಾದ ಬದುಕು
ನಿರ್ವಹಣೆಗೆ ಯೋಗ ಸಾಧನೆ ತುಂಬಾ ಸಹಕಾರಿ ಎಂದು ತಿಳಿಸಿದರು. ಶಿಬಿರಾರ್ಥಿಗಳಾದ ಮಂಜಪ್ಪ, ಶಿಕ್ಷಕಿ ಸುಧಾ, ವಸಂತಕುಮಾರ್ ಮಾತನಾಡಿದರು.
ಪ್ರೊ.ಜಿ.ಎನ್. ಬಸವರಾಜಪ್ಪ, ಪ್ರೊ.ಆರ್.ವಿ. ಹೆಗಡಾಳ್, ಜ್ಯೋತಿ ರಾಜೇಂದ್ರ, ಯೋಗ ಶಿಕ್ಷಕ ದೋರನಾಳು ಮೋಹನ್ ಇದ್ದರು. ಶಿಬಿರದಲ್ಲಿ 60 ಜನರು ಬಾಗವಹಿಸಿದ್ದರು.
--