ಶಾರದಾ ಪೀಠಕ್ಕೆ ಮಾಜಿ ಸಚಿವ ರೇವಣ್ಣ ಭೇಟಿ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠಕ್ಕೆ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಸೋಮವಾರ ಭೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ತೋರಣಗಣಪತಿ, ಶ್ರೀ ಶಂಕರಾಚಾರ್ಯ ದೇವಾಲಯ, ಶ್ರೀ ವಿದ್ಯಾಶಂಕರ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ನಂತರ ನರಸಿಂಹವನದ ಶ್ರೀ ಗುರುನಿವಾಸಕ್ಕೆ ತೆರಳಿ ಭಾರತೀ ತೀರ್ಥರ ಆರ್ಶಿವಾದ ಪಡೆದರು.