ಹಲ್ಲೆ: ದೂರು ಪ್ರತಿದೂರು ದಾಖಲು
ಕ.ಪ್ರ.ವಾರ್ತೆ, ಶೃಂಗೇರಿ, ಮೇ 6
ಹಲ್ಲೆ, ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ಪ್ರತಿದೂರು ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಮುನಾವರ್ ಬಾಷ, ಎಂ.ಕೆ. ಸಾಧಿಕ್, ಶರೀಪ್, ವಸೀಂ, ಶೇಕು, ಮೆಕಾನಿಕ್ ಜಹೀರ್ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದಾರೆ ಎಂದು ವೆಲ್ಕಮ್ ಗೇಟ್ ವಾಸಿ ಅಸ್ಗರ್ ಅಲಿ ಖಾನ್ ದೂರು ದಾಖಲಿಸಿದ್ದಾರೆ.
ಪ್ರತಿದೂರು: ಅಸ್ಗರ್ ಅಲಿ ಖಾನ್, ಮತೀನ್ ಅವರು ತನ್ನ ಹೆಂಡತಿಯ ಮೇಲೆ ಕ್ಷುಲಕ ಕಾರಣಕ್ಕಾಗಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಆನೆಗುಂದ ನಿವಾಸಿ ಮುನಾವರ ಭಾಷಾ ಪ್ರತಿದೂರು ದಾಖಲಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.