ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೋಟೆಲ್‌ನಲ್ಲಿ ಗೌಜಲಹಕ್ಕಿ ಮಾಂಸ ಮಾರಾಟ

Lingaraj Badiger
Updated On : 7 May 2013, 10:46 am

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮೇ 6
ನಗರದ ಕೆಲವು ನಾನ್ ವೆಜ್ ಹೋಟೆಲ್‌ಗಳಲ್ಲಿ ಮಾಂಸ ಪ್ರಿಯರಿಗೆ ಗೌಜಲಹಕ್ಕಿ ಮಾಂಸ ಬೇಯಿಸಿ ನೀಡಲಾಗುತ್ತಿದೆ.
ಇಲ್ಲಿನ ಹೋಟೆಲ್ ಒಂದರಲ್ಲಿದ್ದ ಎರಡು ಗೌಜಲಹಕ್ಕಿಗಳನ್ನು ಅರಣ್ಯ ಇಲಾಖೆಯವರು ವಶಕ್ಕೆ ತೆಗೆದುಕೊಂಡು ಹೋಟೆಲ್ ಮಾಲೀಕನನ್ನು ಬಂಧಿಸಿದ್ದಾರೆ.
ಗೌಜಲಹಕ್ಕಿ ಮಾಂಸದ ಒಂದು ಪ್ಲೇಟಿಗೆ 100 ನಗರದ ಕೆಲವು ಕೋಳಿ, ಕುರಿ, ಮಾರಾಟ ಅಂಗಡಿಗಳಲ್ಲೂ ಗೌಜಲಹಕ್ಕಿಗಳ ಅಕ್ರಮ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಅರಣ್ಯ ಸಂಚಾರಿ ಪೊಲೀಸ್ (ಫಾರೆಸ್ಟ್ ಸೆಲ್) ಭಾನುವಾರ ಕಾರ್ಯಾಚರಣೆ ನಡೆಸಿ ರತ್ನಗಿರಿ ರಸ್ತೆಯ ಹೋಟೆಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2 ಗೌಜಲ ಹಕ್ಕಿಗಳನ್ನು ಪಂಚರದ ಸಮೇತ ವಶಕ್ಕೆ ತೆಗೆದುಕೊಂಡು ಹೋಟೆಲ್ ಮಾಲೀಕ ಮಹಮ್ಮದ್ ಉರ್ ರೆಹಮಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
 ಗೌಜಲಹಕ್ಕಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 4 ರಲ್ಲಿ ಗುರುತಿಸಲಾಗಿದ್ದು, ಸಹಜವಾಗಿ ಅರಣ್ಯ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಇವುಗಳನ್ನು ಬಲೆ ಹಾಕಿ ಜೀವಂತವಾಗಿ ಹಿಡಿದು ನಗರದ ಹೋಟೆಲ್‌ಗಳಿಗೆ, ಮಟನ್ ಸ್ಟಾಲ್‌ಗಳಿಗೆ ಸರಬರಾಜು ಮಾಡಲಾಗುತ್ತಿತ್ತು.
ವಿಚಾರಿಸಿದರೆ ಫಾರಂನಲ್ಲಿ ಅಭಿವೃದ್ಧಿಪಡಿಸಿದ ತಳಿಯೆಂದು ಹೇಳಿ ನಿಜ ಸಂಗತಿ ಮರೆಮಾಚಲಾಗುತ್ತಿತ್ತು. ಈ ಹಕ್ಕಿ ಸಾಕಾಣೆಗೆ ಭಾರತೀಯದಲ್ಲಿ ಯಾವುದೇ ಅನುಮತಿಯಿಲ್ಲ. ಫಾರಂ ಮಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಅವಕಾಶವಿಲ್ಲ. ಈ ರೀತಿ ಗೌಜಲಹಕ್ಕಿಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವುದು ಕಾನೂನು ಬಾಹಿರ ತಪ್ಪು.
ಅರಣ್ಯ ಸಂಚಾರಿ ದಳದ ನಿರೀಕ್ಷಕ ಪ್ರಕಾಶ್, ಸಿಬ್ಬಂದಿ ಲೋಹಿತ್, ದಶರತ್ ಮತ್ತು ವನ್ಯಜೀವಿ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಇದ್ದರು.

ಕರಾಟೆಯಲ್ಲಿ ಉತ್ತಮ ಸಾಧನೆ
ಶಿವಮೊಗ್ಗ: ಬೆಂಗಳೂರಿನ ಜಯಕರ್ನಾಟಕ ಸಂಘಟನೆ ಮತ್ತು ಯೂನಿವರ್ಸನ್ ಮಾರ್ಷಲ್ ಆರ್ಟ್ಸ್ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ ವಾಡೋ ರಿಯು ಕರಾಟೆ ಡೋ ಫೇಡರೇಷನ್ ಆಫ್ ಇಂಡಿಯಾ ಸಂಸ್ಥೆ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಬಾಲಕ, ಬಾಲಕಿಯರ ವಿಭಾಗದಲ್ಲಿ (ಕಟಾ ಮತ್ತು ಫೈಟಿಂಗ್) ಸಂಸ್ಥೆಯ ಸೆನ್ಸೈ ಸಂದೀಪ್ ಕುಮಾರ್ ನೇತೃತ್ವದ ತಂಡ ಮೂರು ಚಿನ್ನ ಸೇರಿದಂತೆ 5 ಬೆಳ್ಳಿ, ನಾಲ್ಕು ಕಂಚಿನ ಪದಕಗಳನ್ನು ಗಳಿಸಿತ್ತು. ಬಾಲಕರ ವಿಭಾಗದಲ್ಲಿ ಸುಖಿತ್ (ಪ್ರ,ದ್ವಿ ಸ್ಥಾನ), ಭರತ್‌ರಾಜ್ (ಪ್ರ,ದ್ವಿ) ಪಡೆದಿದ್ದಾರೆ ಎಂದು ಸಂಸ್ಥೆಯ ಜಿ. ಶಿಹಾನ್ ಚಂದ್ರಕಾಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement