ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅರಣ್ಯ ಸಿಬ್ಬಂದಿಗೆ ತರಬೇತಿ

Vishwanath S
Updated On : 8 May 2013, 4:55 am

ಶಿವಮೊಗ್ಗ: ಸಸಿ ನೆಡುವ ಹಂತದಲ್ಲಿ ಟ್ರೈಕೋಡರ್ಮಾ ಉಪಯೋಗಿಸುವುದರಿಂದ ಶಿಲೀಂಧ್ರ ರೋಗ ತಡೆಗಟ್ಟಬಹುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಬಿ.ಜಿ. ಜಗದೀಶ್ ಹೇಳಿದರು.
 ನಗರದಲ್ಲಿ ಮಂಗಳವಾರ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಂಶೋಧನಾ ವಲಯ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಅರಣ್ಯ ನರ್ಸರಿಯಲ್ಲಿ ಟ್ರೈಕೋಡರ್ಮಾ ಬಳಕೆ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.     ನಮ್ಮ ಇಲಾಖೆಗಳಲ್ಲಿ ಗುಣಮಟ್ಟದ ಸಸಿ ಬೆಳೆಯುವುದು ತುಂಬಾ ಮುಖ್ಯ. ಹಾಗೆ ಬೆಳೆದಾಗ ಮಾತ್ರ ಉತ್ತಮ ಪ್ಲಾಂಟೇಷನ್ ಮಾಡಲು ಸಾಧ್ಯ ಎಂದರು.
 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ರಡ್ಡೇರ, ನಮ್ಮ ಇಲಾಖೆಗಳಲ್ಲಿನ ನರ್ಸರಿಗಳಲ್ಲಿ ಇಲ್ಲಿಯವರೆಗೂ ಟ್ರೈಕೋಡರ್ಮಾವನ್ನು ಅಳವಡಿಸಿಕೊಂಡಿರುವುದಿಲ್ಲ. ನಾವು ನರ್ಸರಿಯಲ್ಲಿ ಹಲವಾರು ರೋಗಗಳಿಗೆ ಔಷಧಿ ಸಿಂಪಡಿಸಿದ್ದೇವೆ. ಆದರೆ ಅವುಗಳಿಂದ ರೋಗ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ನರ್ಸರಿಯಲ್ಲಿ ಟ್ರೈಕೋಡರ್ಮಾ ಅಳವಡಿಸಿಕೊಂಡು ಶಿಲೀಂಧ್ರ ರೋಗವನ್ನು ಸಂಪೂರ್ಣ ತಡೆಗಟ್ಟಿ ಉತ್ತಮ ಸಸಿ ಪಡೆಯಬೇಕು ಎಂದು ತಿಳಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement