ಎಸ್ಸೆಸ್ಸೆಲ್ಸಿ: ಡಿಸಿಎಂಸಿ ಶಾಲೆಗೆ ಶೇ.100
ನರಸಿಂಹರಾಜಪುರ: ಪಟ್ಟಣದ ಡಿಸಿಎಂಸಿ ಶಾಲೆಗೆ ಸತತ 5ನೇ ವರ್ಷವೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಡಿಸಿಎಂಸಿ ಪ್ರೌಢಶಾಲೆಯ ಪ್ರಾಂಶಪಾಲೆ ಪದ್ಮರಮೇಶ್ ತಿಳಿಸಿದ್ದಾರೆ. 73 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 32 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಡಿಸಿಎಂಸಿ ಶಾಲೆ ಆಶ್ರಿತ ಎಂಬ ವಿದ್ಯಾರ್ಥಿನಿ 583 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ನಮಿತ ಎಂಬ ವಿದ್ಯಾರ್ಥಿನಿ 581 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.