ಎಸ್ಎಸ್ಎಲ್ಸಿ: ಜಿಲ್ಲೆಗೆ 13 ನೇ ಸ್ಥಾನ
ಕಭ ವಾರ್ತೆ,ಚಿಕ್ಕಮಗಳೂರು,ಮೇ 7
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ. 82.97 ಫಲಿತಾಂಶ ಲಭಿಸಿದ್ದು, ರಾಜ್ಯದಲ್ಲಿ 13ನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಒಟ್ಟು 7670 ಬಾಲಕರು ಮತ್ತು 7693 ಬಾಲಕಿಯರು ಸೇರಿದಂತೆ ಒಟ್ಟು 15363 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದರು. ಇವರಲ್ಲಿ 6212 ಬಾಲಕರು ಮತ್ತು 6534 ಬಾಲಕಿಯರು ಸೇರಿದಂತೆ ಒಟ್ಟು 12746 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಪೈಕಿ ಬಾಲಕರು ಶೇ. 80.99, ಬಾಲಕಿಯರು ಶೇ. 84.93 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಜಿಲ್ಲೆಯು 11 ನೇ ಸ್ಥಾನ ಪಡೆದುಕೊಂಡಿತ್ತು.
ಕಡೂರು ವಲಯ ಪ್ರಥಮ: ಜಿಲ್ಲೆಯಲ್ಲಿ ಶೇ. 90.23 ರಷ್ಟು ಫಲಿತಾಂಶ ಪಡೆದು ಕಡೂರು ವಲಯ ಪ್ರಥಮ ಸ್ಥಾನದಲ್ಲಿದ್ದು, ಶೇ. 77.25 ರಷ್ಟು ಫಲಿತಾಂಶ ಪಡೆದು 8 ನೇ ಸ್ಥಾನದಲ್ಲಿರುವ ತರೀಕೆರೆ ವಲಯ ಕಡೆಯ ಸ್ಥಾನದಲ್ಲಿದೆ.
ಬೀರೂರು ವಲಯ ಶೇ.84.50, ಚಿಕ್ಕಮಗಳೂರು ಶೇ. 82.91, ಕೊಪ್ಪ- ಶೇ.83.84, ಮೂಡಿಗೆರೆ- ಶೇ.79.51, ಎನ್.ಆರ್.ಪುರ- ಶೇ.77.32, ಶೃಂಗೇರಿ- 88.61 ರಷ್ಟು ಫಲಿತಾಂಶ ಪಡೆದಿದೆ.
66 ಶಾಲೆಗೆ ಶೇ.100 ಫಲಿತಾಂಶ
ಚಿಕ್ಕಮಗಳೂರಿನ ಕೆ.ಬಿ. ಹಾಳ್, ಕಣತಿ, ಬಸ್ಕಲ್, ಜೋಡಿ ಮಾಚೇನಹಳ್ಳಿ ಹಾಗೂ ಬೊಗಸೆಯ ಸರ್ಕಾರಿ ಪ್ರೌಢಶಾಲೆ, ಚಿಕ್ಕಮಗಳೂರು ನಗರದ ವಾಸವಿ ಪ್ರೌಢಶಾಲೆ, ಜ್ಯೋತಿ ನಗರದ ಸಂತ ಜೋಸೆಫ್ ಬಾಲಕರ ಪ್ರೌಢಶಾಲೆ, ಮಾಡೆಲ್ ಪ್ರೌಢಶಾಲೆ, ಆಶಾಕಿರಣ ಪ್ರೌಢಶಾಲೆ, ಎಸ್. ಮಾನಸ ಪ್ರೌಢಶಾಲೆ, ಉಪ್ಪಳ್ಳಿಯ ಜ್ಞಾನ ರಶ್ಮಿ ಪ್ರೌಢಶಾಲೆ, ಸೈಂಟ್ ಮೇರೀಸ್, ಕುವೆಂಪು ವಿದ್ಯಾನಿಕೇತನ ಪ್ರೌಢಶಾಲೆ, ಎಸ್.ಎಂ. ಪೇಟೆಯ ಪೂರ್ಣ ಪ್ರಜ್ಞಾ ಪ್ರೌಢಶಾಲೆ, ಕಳಸಾಪುರದ ಶ್ರೀ ವಿನಾಯಕ ಪ್ರೌಢಶಾಲೆ, ಬೆಳವಾಡಿಯ ಉದ್ಬವ ಗಣಪತಿ ಪ್ರೌಢಶಾಲೆ, ಸಿಂದಗೆರೆಯ ರೇವಣ್ಣ ಸಿದ್ದೇಶ್ವರ ಪ್ರೌಢಶಾಲೆ, ಕೆಳಗೂರಿನ ಶ್ರೀ ಭಾರತಿ ಪ್ರೌಢಶಾಲೆ, ಕಣಿವೇಹಳ್ಳಿಯ ಶ್ರೀ ರಂಗನಾಥ ಸ್ವಾಮಿ ಪ್ರೌಢಶಾಲೆ, ಬೀಕನಹಳ್ಳಿಯ ಹಾಗೂ ಸಿಂದಿಗೆರೆಯ ಮೊರಾರ್ಜಿ ಪ್ರೌಢಶಾಲೆ.
ಕಡೂರು ತಾಲ್ಲೂಕಿನ ಸೋಮನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಕುಪ್ಪಾಳು ಹಾಗೂ ಕಾಮನಕೆರೆಯ ಮೊರಾರ್ಜಿ ಶಾಲೆ, ಗರ್ಜೆಯ ಎಸ್.ಡಿ. ಪ್ರೌಢಶಾಲೆ, ಎಳ್ಳಂಬಳಸೆಯ ಎಸ್.ಎಂ.ಎಸ್.ಆರ್. ಪ್ರೌಢಶಾಲೆ, ಕೆ.ಬಿದರೆಯ ಚಂದ್ರೇಗೌಡ ಸ್ಮಾರಕ ಪ್ರೌಢಶಾಲೆ, ನೀಡುವಳ್ಳಿಯ ನಿರ್ವಾಣ ಸಿದ್ದೇಶ್ವರ ಪ್ರೌಢಶಾಲೆ, ಹಿರೇನಲ್ಲೂರಿನ ಎಸ್.ಆರ್.ಎಂ. ಪ್ರೌಢಶಾಲೆ, ವಡೇರಹಳ್ಳಿಯ ಎಸ್.ಎಂ. ಪ್ರೌಢಶಾಲೆ, ನಗರದ ಜ್ಞಾನ ಭಾರತಿ ಪ್ರೌಢಶಾಲೆ, ದೀಕ್ಷಾ ವಿದ್ಯಾಮಂದಿರ, ಬಿ.ಜಿ.ಎಸ್. ಪ್ರೌಢಶಾಲೆ, ಹೈವೇ ಪ್ರೌಢಶಾಲೆ, ಎಂ.ಎಸ್.ಆರ್. ಪ್ರೌಢಶಾಲೆ, ಪ್ರೇಮಜ್ಯೋತಿ ಪ್ರೌಢಶಾಲೆ, ಸ್ನೇಹ ಪ್ರೌಢಶಾಲೆ, ನೇತಾಜಿ ಪ್ರೌಢಶಾಲೆ, ಗಿರಿಯಪುರದ ಗುರುಕಣಪ ಆಂಗ್ಲ ಪ್ರೌಢಶಾಲೆ.
ಬೀರೂರು ವಲಯದ ಬಳಿಗನೂರು, ಎಮ್ಮೆದೊಡ್ಡಿ, ಗುಬ್ಬಿಹಳ್ಳಿ, ಮಾಚೇಗೊಂಡನಹಳ್ಳಿ ಹಾಗೂ ಜಿಗಣೆಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಜೋಡಿಲಿಂಗದಹಳ್ಳಿಯ ಮೊರಾರ್ಜಿ ಶಾಲೆ.
ತರೀಕೆರೆ ವಲಯದ ಅಜ್ಜಂಪುರದ ಸರ್ಕಾರಿ ಉರ್ದು ಪ್ರೌಢಶಾಲೆ, ಲಕ್ಷ್ಮೀಸಾಗರದ ಎಸ್.ಬಿ.ಹೆಚ್.ಎಸ್.ಎಲ್ ಶಾಲೆ, ನೇರಲಕೆರೆಯ ಎಸ್.ಎ. ಪ್ರೌಢಶಾಲೆ, ಹಿರೇಕಾನವಂಗಲದ ರುದ್ರೇಶ್ವರ ಪ್ರೌಢಶಾಲೆ, ಭಾವಿ ಕೆರೆಯ ಮೊರಾರ್ಜಿ ಶಾಲೆ.
ಶೃಂಗೇರಿ ವಲಯದ ಮೊರಾರ್ಜಿ ಶಾಲೆ ಹಾಗೂ ಜೆ.ಸಿ ಶಾಲೆ. ಕೊಪ್ಪ ತಾಲ್ಲೂಕಿನ ಸಿದ್ದರಮಠದ ಸರ್ಕಾರಿ ಪ್ರೌಢಶಾಲೆ, ಸೆಂಟ್ ಜೋಸೆಫ್ ಪ್ರೌಢಶಾಲೆ, ಶ್ರೀ ಸದ್ಗುರು ಪ್ರೌಢಶಾಲೆ, ಎಸ್.ಎನ್. ಪ್ರೌಢಶಾಲೆ, ಬಿ.ಜಿ.ಎಸ್. ಆಂಗ್ಲ ಮಾಧ್ಯಮ ಶಾಲೆ, ವೆಂಕಟೇಶ್ವರ ವಿದ್ಯಾ ಮಂದಿರ ಮತ್ತು ದುರ್ಗಾ ಪರಮೇಶ್ವರಿ ಪ್ರೌಢಶಾಲೆ. ಎನ್.ಆರ್. ಪುರ ವಲಯದ ಬಾಳೆಹೊನ್ನೂರಿನ ನಿರ್ಮಲ ಪ್ರೌಢಶಾಲೆ ಹಾಗೂ ಹೋಲಿಪ್ರೊಫೆಟ್ ಹೆಚ್.ಎಸ್. ಪ್ರೌಢಶಾಲೆ, ನಗರದ ಡಿ.ಸಿ.ಎಂ.ಸಿ. ಪ್ರೌಢಶಾಲೆ, ಜೀವನ ಜ್ಯೋತಿ ಪ್ರೌಢಶಾಲೆ. ಮೂಡಿಗೆರೆ ವಲಯದ ಕಳಸಾದ ಪ್ರಭೋದಿನಿ ಪ್ರೌಢಶಾಲೆ ಹಾಗೂ ಎಸ್.ಜೆ.ಎಂ. ಪ್ರೌಢಶಾಲೆ, ಬಣಕಲ್ ವಿದ್ಯಾಭಾರತಿ ಪ್ರೌಢಶಾಲೆ,
ಟಾಪ್- 6: ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಚಿಕ್ಕಮಗಳೂರು ತಾಲ್ಲೂಕಿನ ಸೆಂಟ್ ಮೇರಿಸ್ ಶಾಲೆಯ ಜೈತಾಲಿ (617), ಕಡೂರಿನ ಹೈವೆ ಶಾಲೆಯ ಸಂಜೀವ್ ಯು.ರಾವ್ (612), ಎಂ.ಎಸ್.ಆರ್. ಆಂಗ್ಲ ಪ್ರೌಢಶಾಲೆ ಮೌನ.ಎಸ್ (612), ಎಸ್.ಎಂ.ಪೇಟೆ ಪೂರ್ಣ ಪ್ರಜ್ಞಾ ಶಾಲೆಯ ಎಸ್. ಮಾಳವಿಕಾ (611), ಕಡಬಗೆರೆ ಜೆ.ವಿ.ಎಸ್. ಶಾಲೆಯ ಚಂದನ (610) ಹಾಗೂ ಸಂತ ಜೋಸೆಫ್ ಬಾಲಕಿಯರ ಶಾಲೆಯ ಮಧುರಾ (610).