ಕಡೂರು ವಲಯಕ್ಕೆ ಶೇ 91 ಫಲಿತಾಂಶ
ಕ.ಪ್ರ.ವಾರ್ತೆ, ಕಡೂರು, ಮೇ.7
ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡೂರು ವಲಯಕ್ಕೆ ಶೇ 91.45ರಷ್ಟು ಫಲಿತಾಂಶ ಲಭಿಸಿದೆ ಎಂದು ಕಡೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಂಗನಾಥಸ್ವಾಮಿ ತಿಳಿಸಿದ್ದಾರೆ.
ಕಡೂರು ವಲಯದಲ್ಲಿ 1,290 ಬಾಲಕರು, 1,272 ಬಾಲಕಿಯರು ಸೇರಿದಂತೆ ಒಟ್ಟು 2562 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 1,168 ಬಾಲಕರು ಮತ್ತು 1,175 ಬಾಲಕಿಯರು ಸೇರಿದಂತೆ ಒಟ್ಟು 2,324 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
168 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, 989 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 542 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಮತ್ತು 644 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.
15 ಸರ್ಕಾರಿ ಪ್ರೌಢಶಾಲೆ: ಕಡೂರು ವಲಯದಲ್ಲಿ 15 ಸರ್ಕಾರಿ ಫ್ರೌಢಶಾಲೆ, 5 ಸರ್ಕಾರಿ ಪದವಿಪೂರ್ವ ಕಾಲೇಜು, 30 ಅನುದಾನಿತ ಮತ್ತು 11 ಅನುದಾನ ರಹಿತ ಫ್ರೌಢಶಾಲೆಗಳು, 1 ಅನುದಾನಿತ ಪದವಿಪೂರ್ವ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.
ವಲಯದ ಸೋಮನಹಳ್ಳಿ ಸರ್ಕಾರಿ ಫ್ರೌಢಶಾಲೆ, ಕಾಮನಕೆರೆ ಹಾಗೂ ಕುಪ್ಪಾಳುವಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಅನುದಾನಿತ ಫ್ರೌಢಶಾಲೆಗಳಾದ ಗರ್ಜೆಯ ಡಿ. ದೇವರಾಜ ಅರಸು ಫ್ರೌಢಶಾಲೆ, ಯಳ್ಳಂಬಳಸೆಯ ಮರುಳಸಿದ್ದೇಶ್ವರ ಫ್ರೌಢಶಾಲೆ.
ಕೆ ಬಿದರೆಯ ಎ.ಸಿ. ಚಂದ್ರೇಗೌಡ ಸ್ಮಾರಕ ಫ್ರೌಢಶಾಲೆ, ನಿಡುವಳ್ಳಿಯ ನಿರ್ವಾಣ ಸಿದ್ದೇಶ್ವರ ಫ್ರೌಢಶಾಲೆ, ಹಿರೇನಲ್ಲೂರಿನ ಮಲ್ಲಿಕಾರ್ಜುನ ಗ್ರಾಮಾಂತರ ಫ್ರೌಢಶಾಲೆ ಮತ್ತು ವಡೇರಹಳ್ಳಿಯ ಮೃತ್ಯುಂಜಯ ಫ್ರೌಢಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.
ಶೇ.100 ಫಲಿತಾಂಶ: ಖಾಸಗಿ ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಕಡೂರಿನ ದೀಕ್ಷಾ ವಿದ್ಯಾಮಂದಿರ, ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನಭಾರತಿ ಫ್ರೌಢಶಾಲೆ, ಹೈವೇ ಶಾಲೆ, ಎಂ.ಎಸ್.ಆರ್.ಶಾಲೆ, ಪ್ರೇಮಜ್ಯೋತಿ ಮತ್ತು ನೇತಾಜಿ ಪ್ರೌಢಶಾಲೆ, ಗಿರಿಯಾಪುರದ ಗುರುಕೃಪಾ ಫ್ರೌಢಶಾಲೆ ಹಾಗೂ ಪಂಚನಹಳ್ಳಿಯ ಸ್ನೇಹಾ ಎಲಿಮೆಂಟ್ರಿ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿವೆ ಎಂದರು.
ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಢಶಾಲೆಯಲ್ಲಿ ಬಾಲಕಿಯರು ಮೈಲುಗೈ ಸಾಧಿಸಿದ್ದು, ಪರೀಕ್ಷೆಗೆ ಕುಳಿತಿದ್ದ 85 ವಿದ್ಯಾರ್ಥಿನಿಯರ ಪೈಕಿ 74 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದರೆ, 175 ಬಾಲಕರ ಪೈಕಿ 146 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
56 ಪ್ರಥಮ, 54 ದ್ವಿತೀಯ ಮತ್ತು 99 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆರ್. ಪುನೀತ್ ಕುಮಾರ್ ಎಂಬ ವಿದ್ಯಾರ್ಥಿ 594 ಅಂಕಗಳಿಸಿದ್ದರೆ ಸಿ.ದೀಪ್ತಿ 590 ಅಂಕಗಳಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದು ಫ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಎ.ಎನ್. ಶೀಲಾ ತಿಳಿಸಿದ್ದಾರೆ.