ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೊಪ್ಪ ತಾಲೂಕಿಗೆ ಶೇ.85.70

Vishwanath S
Updated On : 8 May 2013, 4:53 am

ಕೊಪ್ಪ: ತಾಲೂಕಿನಲ್ಲಿ 1,140 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದವರಲ್ಲಿ 977 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.85.70 ಫಲಿತಾಂಶ ತಾಲೂಕಿಗೆ ಲಭಿಸಿದೆ.
 ಇದರಲ್ಲಿ 599 ವಿದ್ಯಾರ್ಥಿಗಳು ಪರೀಕ್ಷೆ ಬರೆದವರಲ್ಲಿ 512 ವಿದಾರ್ಥಿಗಳು ತೇರ್ಗಡೆ ಹೊಂದಿದ್ದು, 541 ವಿದ್ಯಾರ್ಥಿನಿಯರು ಪರೀಕ್ಷೆ ಬರೆದವರಲ್ಲಿ 465 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.
ಪ್ರಥಮ ಸ್ಥಾನ: ಕೊಪ್ಪ ವೆಂಕಟೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿನಿ ಜಿ.ಎನ್. ಸುಮೇಧಾ ಶೇ.97.12 ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದರೆ, ಹರಿಹರಪುರ ಎಸ್‌ಎಸ್‌ಇಎಂ ಶಾಲೆಯ ವಿದ್ಯಾರ್ಥಿನಿ ಮೇಘಶ್ರೀ.ಎಸ್ ಶೇ.96.48 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೊಪ್ಪ ಜಿಜೆಸಿ  ಶಾಲೆ ವಿದ್ಯಾರ್ಥಿಗಳಾದ ಸಾನತ್ ಶೇ.94.72, ನಾಗಲಕ್ಷ್ಮಿ ಶೇ.93.76 ಫಲಿತಾಂಶ ಪಡೆದಿದ್ದಾರೆ. ತಾಲೂಕಿನಲ್ಲಿ 26 ಪ್ರೌಢಶಾಲೆಗಳಿದ್ದು 8 ಶಾಲೆಗಳಿಗೆ ಶೇ.100 ರಷ್ಟು ಪಡೆದಿದೆ.
ಶೇ.100 ಫಲಿತಾಂಶ ಪಡೆದ ಶಾಲೆಗಳು: ಅದರಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸಿದ್ದರಮಠ, ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಜಯಪುರ, ವೆಂಕಟೇಶ್ವರ ವಿದ್ಯಾಮಂದಿರ ಕೊಪ್ಪ, ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಮ್ಮರಡಿ, ಸದ್ಗುರು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಸ್ರೀಕಟ್ಟೆ, ಸಂತ ಜೋಸಫ್ ಆಂಗ್ಲ ಮಾಧ್ಯಮ ಶಾಲೆ ಕೊಪ್ಪ, ಅ.ರ.ಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹರಿಹರಪುರ, ಸರ್ಕಾರಿ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಬಂಡಿಗಡಿ ಶಾಲೆ ಈ ಶಾಲೆಗಳಿಗೆ ಶೇ.100 ಫಲಿತಾಂಶ ಲಭಿಸಿದೆ.
 ಕೊಪ್ಪ ಶಾರದ ವಿದ್ಯಾಮಂದಿರ ಶಾಲೆಗೆ ಶೇ.96 ಫಲಿತಾಂಶ ಲಭಿಸಿದ್ದು, ಸರ್ಕಾರಿ ಪ್ರೌಢ ಶಾಲೆಗಳಾದ ಶಾಂತಿ ಗ್ರಾಮ ಶಾಲೆಗೆ ಶೇ.88 ಪಡೆದಿದ್ದು ಇದೇ ರೀತಿಯಾಗಿ ಲೋಕನಾಥ ಪುರ ಶಾಲೆಗೆ ಶೇ.94, ಹೇರೂರು ಶಾಲೆಗೆ ಶೇ.95, ಕುದುರೆಗುಂಡಿ ಶಾಲೆಗೆ ಶೇ.92,ನಿಲುವಾಗಿಲು ಶಾಲೆಗೆ ಶೇ.98, ಮೊರಾರ್ಜಿ ವಸತಿ ಶಾಲೆ ಕೊಪ್ಪ ಶೇ.91, ಬೋಮ್ಲಪುರಾ ಶಾಲೆಗೆ ಶೇ.86, ದ್ಯಾವೇಗೌಡ ಸ್ಮಾರಕ ಪ್ರೌಢ ಶಾಲೆ ಕೊಪ್ಪ ಶೇ.72, ಬಪ್ಪುಂಜಿ ಶಾಲೆಗೆ ಶೇ.80, ಬಾಳಗಡಿ ಶಾಲೆಗೆ ಶೇ.74, ಅಗಳಗಂಡಿ ಶಾಲೆಗೆ ಶೇ.83, ಅಲೆಮನೆ ಶಾಲೆಗೆ ಶೇ.85, ಕೊಪ್ಪ ಸಂತಜೊಸೇಫ್ ಕನ್ನಡ ಮಾಧ್ಯಮ ಶಾಲೆಗೆ ಶೇ.86, ಜಯಪುರ ಶಾಲೆಗೆ ಶೇ.77, ಹರಿಹರಪುರ ಅ.ರಾ.ಸ. ಕನ್ನಡ ಮಾಧ್ಯಮ ಶಾಲೆಗೆ ಶೇ.97, ಬಸ್ರೀಕಟ್ಟೆ ಸದ್ಗುರು ಕನ್ನಡ ಮಾಧ್ಯಮ ಶಾಲೆಗೆ ಶೇ.89, ನಾರ್ವೆ ಶಾಲೆಗೆ ಶೇ.87 ರಷ್ಟು ಫಲತಾಂಶಗಳು ಲಭ್ಯವಾಗಿದೆ ಎಂದು ಬಿಇಒ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement