ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಿ.ಟಿ. ರವಿ ಹೆಸರಲ್ಲಿ ವ್ಯಾಪಕ ಬೆಟ್ಟಿಂಗ್

Vishwanath S
Updated On : 8 May 2013, 4:54 am

ಕ.ಪ್ರ.ವಾರ್ತೆ ,    ಚಿಕ್ಕಮಗಳೂರು ,    ಮೇ 7
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕೆ ಸಂಬಂಧಿಸಿ ನಗರದಲ್ಲಿ ವ್ಯಾಪಕವಾಗಿ ಬೆಟ್ಟಿಂಗ್ ದಂಧೆ ನಡೆದಿದೆ.
 ಚುನಾವಣಾ ಪೂರ್ವದಲ್ಲಿ ಆರಂಭವಾದ ಬೆಟ್ಟಿಂಗ್ ದಂಧೆ ಮಂಗಳವಾರ ಸಂಜೆಯವರೆಗೂ ಮುಂದುವರೆದಿತ್ತು. 500 ರುಪಾಯಿಯಿಂದ 1 ಲಕ್ಷದವರೆಗೆ ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಲಾಗಿದೆ. ಈ ದಂಧೆ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಹೋಟೆಲ್‌ನಲ್ಲಿ ಸರ್ವರ್ ಆಗಿರುವ ಹುಡುಗರು ಸೇರಿದಂತೆ ಬಡ್ಡಿ ವ್ಯವಹಾರ ನಡೆಸುವವರು, ರಾಜಕೀಯ ಪಕ್ಷದ ಕಾರ್ಯಕರ್ತರು, ಮುಖಂಡರು ಬೆಟ್ಟಿಂಗ್‌ನಲ್ಲಿ  ಹಣ ಹೂಡಿದ್ದಾರೆ.
ಅಬ್ಬರದ ಪ್ರಚಾರ: ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಈ ಬಾರಿ ಅಬ್ಬರದ ಪ್ರಚಾರ ನಡೆಸಿದ್ದು, ಕಾಂಗ್ರೆಸ್ ಪರ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಬಿಜೆಪಿ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜೆಡಿಎಸ್ ಪರ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದರು.
ಆರೋಪ, ಪ್ರತ್ಯಾರೋಪ: ಬರೀ ಇಷ್ಟೇ ಅಲ್ಲ, ಈ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪ್ರಚಾರದಲ್ಲಿ ಕೇಳಿ ಬಂದ ಆರೋಪ, ಪ್ರತ್ಯಾರೋಪಗಳು, ಸಾವಿರಾರು ಸಂಖ್ಯೆಯಲ್ಲಿ ನಡೆದ ರೋಡ್ ಶೋ, ಆ ಮೂಲಕ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಇವೆಲ್ಲವೂ ಬೆಟ್ಟಿಂಗ್‌ಗೆ ಹಣ ಹೂಡಲು ಪ್ರಮುಖ ಕಾರಣವಾಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 15 ಮಂದಿ ಸ್ಪರ್ಧೆ ಮಾಡಿದ್ದಾರೆ. ಈ ಪೈಕಿ ಸಚಿವ ಸಿ.ಟಿ. ರವಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಅವರ ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂಬ ಲೆಕ್ಕಾಚಾರದಲ್ಲಿ ಹಣ ಹೂಡಿದ್ದಾರೆ. ಶಾಂತೇಗೌಡರಿಗೆ ಹೋಲಿಕೆ ಮಾಡಿದರೆ ಸಚಿವ ಸಿ.ಟಿ. ರವಿ ಹೆಸರಿನಲ್ಲಿ ಬೆಟ್ಟಿಂಗ್‌ಗೆ ಹಣ ಹಾಕಿರುವವರೇ ಹೆಚ್ಚು ಮಂದಿ ಇದ್ದಾರೆ.
 ಬುಧವಾರ ಹೊರ ಬರಲಿರುವ ಚುನಾವಣಾ ಫಲಿತಾಂಶ ರಾಜಕೀಯ ಪಕ್ಷಗಳ ಜತೆಗೆ ಹಣ ಹೂಡಿರುವವರು ಎದುರು ನೋಡುತ್ತಿದ್ದಾರೆ. ಅಭ್ಯರ್ಥಿಗಳಿಗೆ ಮಾತ್ರವಲ್ಲ. ಲಕ್ಷಾಂತರ ರುಪಾಯಿ ಬೆಟ್ಟಿಂಗ್‌ಗೆ ಹಾಕಿರುವವರಲ್ಲಿ ತಳಮಳ ಉಂಟಾಗಿದೆ. ಇದಕ್ಕೆಲ್ಲಾ ಬುಧವಾರ ಮಧ್ಯಾಹ್ನವೇ ಉತ್ತರ ಸಿಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement