ಗೆಲುವು ಜವಾಬ್ದಾರಿ ಹೆಚ್ಚಿಸಿದೆ: ರವಿ
ಚಿಕ್ಕಮಗಳೂರು: ಹ್ಯಾಟ್ರಿಕ್ ಗೆಲುವಾಗಿದೆ. ಈ ಗೆಲುವು ಜವಾಬ್ದಾರಿ ಹೆಚ್ಚು ಮಾಡಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಅಭಿವೃದ್ಧಿ ಬಗ್ಗೆ ಚರ್ಚೆ ಆಗಿದ್ದರೆ ಗೆಲುವಿನ ಮತಗಳ ಅಂತರ ಇನ್ನಷ್ಟು ಜಾಸ್ತಿಯಾಗುತ್ತಿತ್ತು. ನಿರೀಕ್ಷಿತ ಮಟ್ಟದಲ್ಲಿ ಮತಗಳು ಬಂದಿಲ್ಲ. ಆದರೂ ಇದು, ದೊಡ್ಡ ಮಟ್ಟದ ಗೆಲವು ಎಂದು ಸುದ್ದಿಗಾರರಿಗೆ ಮಾತನಾಡುವಾಗ ತಿಳಿಸಿದರು.
ಕ್ಷೇತ್ರದ ಮತದಾರರು ಅಭಿವೃದ್ಧಿ ಮತ್ತು ನೆಮ್ಮದಿಗಾಗಿ ಬಿಜೆಪಿಗೆ ವೋಟ್ ಮಾಡಿದ್ದಾರೆ. ವೈಷಮ್ಯಕ್ಕೆ ಅವಕಾಶ ನೀಡದೆ ಮತ್ತೆ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡುತ್ತೇವೆ. ಸಂಕಷ್ಟದ ಪರಿಸ್ಥಿತಿಯಲ್ಲೂ ಒಳ್ಳೆಯ ಫಲಿತಾಂಶ ಬಂದಿದೆ ಎಂದರು.