ನಿಂಗಯ್ಯಗೆ ಗೆಲವು
ಮೂಡಿಗೆರೆ, ಜೆಡಿಎಸ್ನ ಮಾಜಿ ಸಚಿವ ಬಿ.ಬಿ. ನಿಂಗಯ್ಯ 14 ವರ್ಷದ ನಂತರ ಮತ್ತೆ ಮೂಡಿಗೆರೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಮೂಡಿಗೆರೆ ಮೀಸಲು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮಾಜಿ ಪಶುಸಂಗೋಪನಾ ಸಚಿವ ಬಿ.ಬಿ. ನಿಂಗಯ್ಯ ಪ್ರತಿಸ್ಪರ್ಧಿ ಕಾಂಗ್ರೆಸ್ನ ಚಂದ್ರಪ್ಪ ಅವರನ್ನು 635 ಮತಗಳ ಅಂತರದಿಂದ ಸೋಲಿಸುವ ಮೂಲಕ ಆಯ್ಕೆ ಯಾಗಿದ್ದಾರೆ.
ಜನತೆಗೆ ಸಂದ ಗೆಲವು
ಚಿಕ್ಕಮಗಳೂರು: ಇದು ಕ್ಷೇತ್ರದ ಜನತೆಗೆ ಸಂದ ಗೆಲವು ಎಂದು ತರೀಕೆರೆ ಕ್ಷೇತ್ರದಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ. ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಭದ್ರಾ ಮತ್ತು ಹೆಬ್ಬೆಯಿಂದ ತರೀಕೆರೆ ಕ್ಷೇತ್ರದ ಜನರಿಗೆ ನೀರೋದಗಿಸಲು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನತೆಯ ಪರ ನಿಂತು ಕೆಲಸ ಮಾಡುತ್ತೇನೆ ಎಂದರು.