ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿ ವಿಜಯೋತ್ಸವ

Lingaraj Badiger
Updated On : 9 May 2013, 11:01 am

ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಜಯ ಗಳಿಸಿದ ಸುದ್ದಿ ತಲುಪುತ್ತಿದ್ದಂತೆ ಪಟ್ಟಣದ ಬಿಜೆಪಿ ಕಚೇರಿ ಎದರು ಹಾಗೂ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಮುಖ್ಯರಸ್ತೆಯಲ್ಲಿ ಜಯ ಘೋಷದೊಂದಿಗೆ ಮೆರವಣಿಗೆ ನಡೆಸಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಾಟರ್ ಟ್ಯಾಂಕ್ ಎದರು ಸರ್ಕಲ್‌ನಲ್ಲಿ ವಿಜಯೋತ್ಸವ ಆಚರಿಸಿದರು. ಸಂಜೆ ಸಮಯದಲ್ಲಿ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಬಂದ ಬಿಜೆಪಿಯ ನೂರಾರು ಕಾರ್ಯಕರ್ತರು ಬೈಕ್, ಇತರೆ ವಾಹನದೊಂದಿಗೆ ರ್ಯಾಲಿ ನಡೆಸಿದರು.
ರ್ಯಾಲಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದರು. ಸೀತೂರು ಗ್ರಾಮಂ ಪಂಚಾಯ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೆರೆಗದ್ದೆ, ನಾಗರಮಕ್ಕಿ, ಹಳ್ಳಿಬೈಲು ಮುಂತಾದ ಕಡೆ ಸಂಭ್ರಮ ಹಂಚಿಕೊಂಡರು. ಬಿ.ಎಚ್. ಕೈಮರದಿಂದ ನರಸಿಂಹರಾಜಪುರದವರೆಗೆ ಬೈಕ್ ಹಾಗೂ ಇತರೆ ವಾಹನದ ರ್ಯಾಲಿ ನಡೆಸಿದರು.
ಜೀವರಾಜ್ ಮೆರವಣಿಗೆ: ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಆಗಮಿಸಿದ ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರನ್ನು ಹುಣಿಸೆಹಳ್ಳಿ ಸಮೀಪದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಹುಣಿಸೆಹಳ್ಳದಿಂದ ಬಾಳೆಹೊನ್ನೂರಿನವರೆಗೆ ತೆರೆದ ವಾಹನದಲ್ಲಿ ಡಿ.ಎನ್. ಜೀವರಾಜ್ ಬಾಳೆಹೊನ್ನೂರಿಗೆ ಆಗಮಿಸಿದರು. ಬಾಳೆಹೊನ್ನೂರು ಪಟ್ಟಣದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಡಿ.ಎನ್. ಜೀವರಾಜ್ ಅವರೊಂದಿಗೆ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನೀಲೇಶ್, ರಾಮಸ್ವಾಮಿ, ಕೆ.ಟಿ. ವೆಂಕಟೇಶ್, ವೆನಿಲಾ ಭಾಸ್ಕರ್, ಮಹಾಬಲರಾವ್, ಎಸ್.ಜಿ. ಕೃಷ್ಣಮೂರ್ತಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement