ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೈ.ಎಸ್.ವಿ. ದತ್ತ ವಿಜಯೋತ್ಸವ

Lingaraj Badiger
Updated On : 9 May 2013, 10:54 am

ಬೀರೂರು: ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಗಮನಾರ್ಹವಾದ 42 ಸಾವಿರಕ್ಕೂ ಅಧಿಕ ಮತಗಳ ಅಂತರದ ಜಯ ದಾಖಲಿಸಿದ ಸಂದರ್ಭದಲ್ಲಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೀರೂರಿನಲ್ಲಿ ಸಂಭ್ರಮಾಚರಣೆ ನಡೆಸಿ ಊರಿನ ಪ್ರಮಖ ಬೀದಿಗಳಲ್ಲಿ ದತ್ತಾರೊಂದಿಗೆ ವಿಜಯೋತ್ಸವ ಆಚರಿಸಿದರು.
ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಿಂದ ಮಧ್ಯಾಹ್ನ ಆರಂಭವಾದ ಮೆರವಣಿಗೆಯಲ್ಲಿ ಅಭಿಮಾನಿಗಳ ಜೊತೆ ರಸ್ತೆಯುದ್ದಕ್ಕೂ  ಹಿತೈಷಿಗಳು ಪುಷ್ಪಹಾರ ಅರ್ಪಿಸಿ ಶುಭ ಕೋರಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಜಿಪಂ ಸದಸ್ಯ ಬಿ.ಪಿ.ನಾಗರಾಜ್, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಶಿವರತನ್ ಸಂಚೇತಿ, ಜಗದೀಶ್, ಪುರಸಭಾ ಸದಸ್ಯೆ ವಸಂತಮ್ಮ, ರವಿಕುಮಾರ್, ಉಮಾಶಂಕರ್, ಉದಯಕುಮಾರ್, ಸುಮಾಕಾಂತ್, ಹರಿಪ್ರಸಾದ್, ಸೋಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement