ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎಸ್ಸೆಸ್ಸೆಲ್ಸಿ: ಪಿ.ಕೆ. ಸುಜಿತ್ ಶೇ.97

Lingaraj Badiger
Updated On : 10 May 2013, 12:05 pm

ನರಸಿಂಹರಾಜಪುರ: ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಪಿ.ಕೆ. ಸುಜಿತ್ ಎಸ್‌ಎಸ್‌ಎಲ್‌ಸಿಯಲ್ಲಿ 607 (ಶೇ.97) ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮೆಣಸೂರು ಗ್ರಾಮದ ಪಿ.ಕೆ. ಸುಜಿತ್ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು 612 ಅಂಕ ನಿರೀಕ್ಷೆ ಮಾಡಿದ್ದೆ. ಆದರೂ 607 ಅಂಕ ಬಂದಿರುವುದಕ್ಕೆ ಸಂತೋಷ ತಂದಿದೆ. ನನ್ನ ತಂದೆ, ತಾಯಿ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಅಂಕ ಬರಲು ಸಾಧ್ಯವಾಗಿದೆ ಎಂದರು.
ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ನನಗೆ ಉಚಿತ ಪ್ರವೇಶ ಸಿಕ್ಕಿದೆ. ವಸತಿ ಸೌಕರ್ಯಕ್ಕೆ ಮಾತ್ರ ಹಣ ಕಟ್ಟಬೇಕಾಗಿದೆ ಎಂದಿದ್ದಾನೆ.
ಆರ್ಥಿಕವಾಗಿ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿ ಪಿ.ಕೆ. ಸುಜಿತ್‌ನ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುವರು  ನರಸಿಂಹರಾಜಪುರ ಕೆನರಾ ಬ್ಯಾಂಕಿನ ಖಾತೆ ಸಂಖ್ಯೆ 1453119013368 ಕ್ಕೆ ಹಣ ಜಮಾ ಮಾಡಬಹುದು.ದೂರವಾಣಿ- 9481153298.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement