16 ರಿಂದ ಟೇಕ್ವಾಂಡೋ ತರಬೇತಿ
ಚಿಕ್ಕಮಗಳೂರು: ಜಿಲ್ಲಾ ಟೇಕ್ವಾಂಡೋ ಸಂಸ್ಥೆ ವತಿಯಿಂದ ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದ ಹಾಲ್ನಲ್ಲಿ ಮೇ 16 ರಿಂದ 30 ರವರೆಗೆ ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ ಆತ್ಮರಕ್ಷಣಾ ಕಲೆ ಮತ್ತು ಟೇಕ್ವಾಂಡೋ ಕ್ರೀಡೆ ಜೊತೆಗೆ ಜಿಮ್ನಾಸ್ಟಿಕ್, ಇತರೆ ಸಾಹಸ ಕ್ರೀಡಾ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿದಿನ ಬೆಳಿಗ್ಗೆ 6.30 ರಿಂದ 8.30ರವರೆಗೆ ತರಬೇತಿ ನೀಡಲಾಗುವುದು. 5 ವರ್ಷ ಮೇಲ್ಪಟ್ಟ ಬಾಲಕ, ಬಾಲಕಿಯರು ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಆಸಕ್ತರು ಮೇ 15ರ ಬೆಳಿಗ್ಗೆ 6.30ಕ್ಕೆ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದೆ. ಮಾಹಿತಿಗೆ ಗಿರೀಶ್ ಮೊ.9482675536.