ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದು ಕನ್ಯಕಾ ಪರಮೇಶ್ವರಿ ಸುವರ್ಣ ಮಹೋತ್ಸವ

Vishwanath S
Updated On : 12 May 2013, 12:09 pm

ಚಿಕ್ಕಮಗಳೂರು: ನಗರದ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ಪ್ರತಿಷ್ಠಾಪನಾ ಸುವರ್ಣ ಮಹೋತ್ಸವ ಮೇ 13ರ ಅಕ್ಷಯ ತದಿಗೆಯಂದು ನಡೆಯಲಿದೆ.
ಮೇ 21ರವರೆಗೂ ಶ್ರೀ ವಾಸವಿ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ನಗರದ ಎಂ.ಜಿ. ರಸ್ತೆಯಲ್ಲಿರುವ ಅಮ್ಮನವರ  ದೇವಾಲಯದ ಮೂರು ಗರ್ಭಗುಡಿ ಬಾಗಿಲಿಗೆ ಸುವರ್ಣ ಕವಚ ಹಾಗೂ ಹನ್ನೊಂದುವರೆ ಅಡಿ ಎತ್ತರದ ಬೆಳ್ಳಿ ರಥವನ್ನು ಸಮರ್ಪಿಸಲಾಗುವುದೆಂದು ಆರ್ಯವೈಶ್ಯ ಮಂಡಳಿ ಉಪಾಧ್ಯಕ್ಷ ಕೆ.ಎಸ್. ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1963ರಲ್ಲಿ ಎಂ.ಜಿ. ರಸ್ತೆಯ ಪ್ರಸ್ತುತ ದೇವಾಲಯದ ಹೊಸ ಗರ್ಭಗುಡಿಯಲ್ಲಿ ಅಮ್ಮನವರ ಪ್ರತಿಷ್ಠಾಪನೆಗೊಂಡಿದ್ದು, 50 ವರ್ಷಗಳು ಪೂರ್ಣಗೂಂಡಿದೆ. ವಾಸ್ತವವಾಗಿ 130 ವರ್ಷದ ಹಳೆ ದೇವಾಲಯ ಇದ್ದಾಗಿದೆ ಎಂದು ಹೇಳಿದ್ದಾರೆ.
ಇದರ ಸವಿನೆನಪಿಗಾಗಿ ನಗರದ ಆರ್ಯವೈಶ್ಯ ಕುಲಬಾಂಧವರು ದೇವಸ್ಥಾನದ ಮೂರೂ ಗರ್ಭಗುಡಿಗಳ ಬೆಳ್ಳಿಬಾಗಿಲು, ಸುಂದರ ಕೆತ್ತನೆಯ ಬೆಳ್ಳಿರಥವನ್ನು  ಪೂಜ್ಯಶ್ರೀ ಆರ್ಯವೈಶ್ಯ ಪೀಠಾಧಿಪತಿ ಶ್ರೀ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಸಮರ್ಪಿಸಲಾಗುವುದು. ಸೋಮವಾರ ಬೆಳಿಗ್ಗೆ 6.30ಕ್ಕೆ ಮೂಲ ದೇವರುಗಳಿಗೆ ಅಭಿಷೇಕ ಅಮ್ಮನವರಿಗೆ ಬೆಳ್ಳಿಸೀರೆ ಸಮರ್ಪಣೆಯೊಂದಿಗೆ ವಿಶೇಷ ಪುಷ್ಪಾಲಂಕಾರ ಸೇವೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದೆ. ಅಂದು ಗಣಪತಿ ಹೋಮ, ಶ್ರೀ ಸತ್ಯನಾರಾಯಣಸ್ವಾಮಿ ವ್ರತ, ಸಂಜೆ ಪ್ರಾಕಾರೋತ್ಸವ ಮತ್ತಿತರ ಸೇವೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement