ಇಂದು ನೆಮ್ಮಾರು ಉರೂಸ್
ಶೃಂಗೇರಿ: ತಾಲೂಕಿನ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ನೆಮ್ಮಾರಿನಲ್ಲಿರುವ ಸೂಫಿ ಸಂತ ಹಜರತ್ ದಿಲಾವರುಷ ಔಲಿಯಾ ದರ್ಗಾದಲ್ಲಿ ವಿಶೇಷ ಸಮಾರಂಭ ಮೇ 12 ಭಾನುವಾರ ನಡೆಯಲಿದೆ. ಅಂದು ಬೆಳಗ್ಗೆಯಿಂದ ಉರೂಸ್ ಅಂಗವಾಗಿ ವಿವಿಧ ಧಾರ್ಮಿಕ ಕ್ರಿಯಾ ವಿಧಿವಿಧಾನಗಳು ನೆರವೇರಲಿದೆ. ಮಧ್ಯಾಹ್ನ 2 ಗಂಟೆಯಿಂದ ದಾವತ್-ಇ-ಇಸ್ಲಾಮಿ ತಂಡದವರಿಂದ ಮತಪ್ರಸಂಗ, ಉರೂಸ್ ಆಚರಣೆ, ನಡೆದು ಬಂದ ದಾರಿ ಕುರಿತು ವಿಶೇಷ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸಂಜೆ 5 ಗಂಟೆಗೆ ದರ್ಗಾದ ಮುಂಭಾಗದಿಂದ ಆಕರ್ಷಕ ಝರಬ್ ಕಾರ್ಯಕ್ರಮದೊಂದಿಗೆ ಸಂದಲ್ ಮೆರವಣಿಗೆ ಹೊರಟು ಮುಖ್ಯ ಬೀದಿಯಲ್ಲಿ ಸಾಗಲಿದೆ. ನಂತರ ಸಂಜೆ 7 ಗಂಟೆಗೆ ದರ್ಗಾದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಬಯಾನಾಥ್,ತರ್ಬಿಯತ್ ಇಸ್ತಿಮಾ ಕಾರ್ಯಕ್ರಮ ಜರುಗಲಿದೆ. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.