ಬೀರೂರಿನಲ್ಲಿ ನೀರಿನ ರಾಜಕೀಯ
ಬೀರೂರು: ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಹತಾಶರಾಗಿ ಪಟ್ಟಣದಲ್ಲಿ ಪುರಸಭೆಗೆ ಆಯ್ಕೆಯಾಗಿರುವ ಕೆಲವು ಸದಸ್ಯರು ಪಟ್ಟಣದ ನಾಗರಿಕರಿಗೆ ನೀರು ಪೂರೈಸದೆ ರಾಜಕೀಯ ಮಾಡುತ್ತಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ಬೀರೂರು ಪುರಸಭೆಯ ಕೆಲ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಮರೆತು, ವೈ.ಎಸ್.ವಿ. ದತ್ತರವರ ಗೆಲುವು ಸಹಿಸಲಾರದೆ ನೀರು ಕೇಳಿದರೆ ವೈ.ಎಸ್.ವಿ.ದತ್ತರವ ಬಳಿ ಹೋಗಿ ಕೇಳಿ ಎಂಬ ಉಡಾಫೆ ಉತ್ತರ ಹೇಳುವ ಮೂಲಕ ತಮ್ಮ ಜವಬ್ದಾರಿ ಮರೆತು ಕ್ಷುಲ್ಲಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜನರಿಗೆ ಅಗತ್ಯವಿರುವ ಮೂಲ ಸವಲತ್ತು ನೀಡಬೇಕಿರುವುದು ಸದಸ್ಯರ ಕರ್ತವ್ಯ.
ಅದು ಬಿಟ್ಟು ದ್ವೇಷದ ರಾಜಕಾರಣ ಮಾಡುವುದರಿಂದ ಯಾವುದೇ ಸಾಧನೆ ಮಾಡಲು ಸಾದ್ಯವಿಲ್ಲ.
ಆದ್ದರಿಂದ ಯಾವುದೇ ಪಕ್ಷದ ಪುರಸಭಾ ಸದಸ್ಯರು ಇದ್ದರೂ ಜನರ ಒಳಿತಿಗಾಗಿ ಚಿಂತನೆ ನಡೆಸಬೇಕು ಎಂದು ಮಹೇಶ್ ಕಿವಿಮಾತು ಹೇಳಿದ್ದಾರೆ.