ವೈದ್ಯರ ವರ್ಗಾವಣೆಗೆ ಕಸರತ್ತು: ಆರೋಪ
ಕ.ಪ್ರ.ವಾರ್ತ ಮೂಡಿಗೆರ ಮೇ 12
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ತಜ್ಞ ವೈದ್ಯರನ್ನು ನೇಮಕ ಮಾಡಿರುವುದು ಸ್ವಾಗತಾರ್ಹ ಆದರೆ ಈ ವೈದ್ಯರು ನೇಮಕವಾಗಿ ಕೇವಲ ಮೂರೇ ದಿನದಲ್ಲಿ ಇಲ್ಲಿಂದ ವರ್ಗಾವಣೆ ಮಾಡಲು ತೆರೆಮರೆಯಲ್ಲಿ ಕಸರತ್ತು ನಡೆಸಲಾಗುತ್ತಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಳಸ ಪಟ್ಟಣ ಶಾಖೆ ಸದಸ್ಯರು ಆರೋಪಿಸಿದ್ದಾರೆ.
ಇಲ್ಲಿ ಕೋಟಿ ರೂ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರವೊಂದು ಇದ್ದರೂ, ಉತ್ತಮ ತಜ್ಞ ವೈದ್ಯರಿಲ್ಲದೆ ಸಮಸ್ಯೆ ಎದುರಿಸುತ್ತಿತ್ತು. ಇದನ್ನು ಮನಗಂಡು ಸಿಪಿಐ ಹೋರಾಟ ಮಾಡಿ ಅಧಿಕಾರಿಗಳ ಕಣ್ತೆರುಸುವಲ್ಲಿ ಯಶಸ್ವಿ ಯಾಗಿದೆ ಎಂದರು.
ವಗಾಣವಣೆ ಕಸರತ್ತು: ನಿಡುವಾಳೆ ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಜ್ಞ ವೈದ್ಯ ಡಾ. ಸಂದೀಪ್ ಅವರನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೆ ಇಲ್ಲಿಗೆ ವರ್ಗಾವಣೆ ಮಾಡಿ ಕೇವಲ 4 ದಿನದಲ್ಲಿ ಇಲ್ಲಿಯ ಕೆಲ ಪ್ರಾಬಲ್ಯವಿರುವ ವ್ಯಕ್ತಿಗಳು ಇಲ್ಲಿಂದ ವರ್ಗಾವಣೆ ಮಾಡಿಸಲು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನು ಈಗಾಗಲೇ ಭಾರತೀಯ ಕಮ್ಯುನಿಸ್ಟ್ ಪಕ್ಷ ಗಮನಿಸಿ, ಸಂಬಂಧಿಸಿದವರಿಗೆ ದೂರು ನೀಡಿ ವೈದ್ಯರನ್ನು ಇಲ್ಲಿಯೇ ಉಳಿಸಿಕೊಡುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಇಲ್ಲಿಂದ ವೈದ್ಯರನ್ನು ವರ್ಗಾವಣೆ ಮಾಡಿದಲ್ಲಿ ಸಿಪಿಐ ಕಳಸ ಪಟ್ಟಣ ಶಾಖೆ ಪ್ರತಿಭಟನೆ ಹಾದಿ ಹಿಡಿದು, ವೈದ್ಯರನ್ನು ಪುನಃ ನೇಮಿಸುವ ತನಕ ಪ್ರತಿಭಟನೆ ಮುಂದುವರೆಯಲಿದೆ ಎಂದು ಕಾರ್ಯದರ್ಶಿ ಶ್ರೀಧರ ಆಚಾರ್ಯ ತಿಳಿಸಿದ್ದಾರೆ.
ಖರ್ಗೆಗೆ ತಪ್ಪಿದ ಸಿಎಂ ಪಟ್ಟ: ಆರೋಪ
ಚಿಕ್ಕಮಗಳೂರು: ಕಳೆದ 5 ದಶಕಗಳಿಂದ ಕಾಂಗ್ರೆಸ್ ಪಕ್ಷದ ಏಳ್ಗೆಗಾಗಿ ಶ್ರಮಿಸಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸುವ ಮೂಲಕ ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ಡಿಎಸ್‌ಎಸ್ ಮುಖಂಡ ಮಧುಸೂದನ್ ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಸೋಲಿಸುವ ಗುರಿಯನ್ನು ಇಟ್ಟುಕೊಂಡು ಕಾಂಗ್ರೆಸ್‌ನ ಕೆಲ ಮುಖಂಡರು ದಲಿತ ನಾಯಕರ ವಿರುದ್ಧ ಪಿತೂರಿ ನಡೆಸುತ್ತಾ ಬಂದರು. ಪಕ್ಷಪಾತ ಮಾಡಿರುವ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ನೀಡಿ ಮಣೆ ಹಾಕುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿರುವುದು ಖಂಡನಾರ್ಹವಾದುದು ಎಂದಿದ್ದಾರೆ.
ಬ್ಲಾಕ್ ಬೆಲ್ಟ್ ಪದವಿ
ಮೂಡಿಗೆರೆ: ಇತ್ತೀಚೆಗೆ ಮೂಡಿಗೆರೆಯಲ್ಲಿ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡೀಷನಲ್ ಮಾರ್ಷಲ್ ಕರಾಟೆ ಸಂಸ್ಥೆಯಿಂದ ಒಂದು ವಾರಗಳ ಕಾಲ ಬ್ಲಾಕ್ ಬೆಲ್ಟ್ ಪದವಿ ಪರೀಕ್ಷೆಯಲ್ಲಿ ಬ್ಲಾಕ್ ಬೆಲ್ಟ್ ಪದವಿ ಎಂ.ಸಿ. ಧನುಷ್, ಮೂಡಿಗೆರೆ ಚಂದ್ರಶೇಖರ್ ಮತ್ತು ಪ್ರೇಮಾ ದಂಪತಿಯ ಪುತ್ರರಾಗಿದ್ದಾರೆ.