ಕುಡಿಯುವ ನೀರಿಗಾಗಿ ಭಾವಿ ಸ್ವಚ್ಛತೆ
ಕೊಪ್ಪ: ತಾಲೂಕಿನ ಹರಂದೂರು ಗ್ರಾಪಂ ವ್ಯಾಪ್ತಿಯ ರಾಘವೇಂದ್ರ ಬಡವಾಣೆಯಲ್ಲಿ ಕುಡಿಯುವ ನೀರಿಗಾಗಿ ಗ್ರಾಪಂ ಭಾವಿಯ ಹೂಳೆತ್ತಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ಒದಗಿಸಲು ಮಂಗಳವಾರ ಹರಂದೂರು ಗ್ರಾಪಂ ಕಾರ್ಯಪ್ರವೃತ್ತವಾಗಿತ್ತು.
ಭಾವಿಯಲ್ಲಿ ಹೂಳು ತುಂಬಿ ನೀರೆತ್ತುವ ಮೋಟಾರ್ ಎರಡು ಬಾರಿ ಕೆಟ್ಟಿದ್ದರಿಂದ ಮೂರುದಿನಗಳ ಕಾಲ ಟ್ಯಾಂಕರ್‌ನಲ್ಲಿ ನೀರು ಸರಾಬರಾಜು ಮಾಡಲಾಗಿತ್ತು.
ಅಲ್ಲದೇ ಈ ಭಾವಿಯಿಂದ ಬಡವಾಣೆಗೆ ಕಲುಷಿತ ನೀರು ಪೂರೈಕೆ ಅಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು.
ಈ ಹಿನ್ನಲೆಯಲ್ಲಿ ಗ್ರಾಪಂನಿಂದ ಭಾವಿ ಸ್ವಚ್ಛತೆಗೆ ಮುಂದಾಗಿರುವುದಾಗಿ ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ ತಿಳಿಸಿದರು.
ಸದಸ್ಯೆ ನಾಗರತ್ನಮ್ಮ ಹಾಗೂ ಪಪಂ ಸದಸ್ಯರಾದ ವಿಜಯಕುಮಾರ್, ಸುಬ್ರಮಣ್ಯ ಮತ್ತಿತರರು ಕಾಮಗಾರಿ ಸ್ಥಳದಲ್ಲಿ ಹಾಜರಿದ್ದರು.