ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತೆಲುಗುಗೌಡ ಸಮಾಜಕ್ಕೆ ಪ್ರಾತಿನಿಧ್ಯ

Lingaraj Badiger
Updated On : 15 May 2013, 10:59 am

ಕ.ಪ್ರ. ವಾರ್ತೆ ಕಡೂರು ಮೇ 15 ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ತೆಲುಗುಗೌಡ ಸಮಾಜ ತನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ತಮ್ಮ ಪ್ರಜ್ಞಾವಂತಿಕೆ ತೋರಿದ್ದು, ಈ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಸೇರಿದಂತೆ ಎಲ್ಲ ರೀತಿಯ ಹಕ್ಕುಗಳನ್ನು ದೊರಕಿಸಿಕೊಡಲು ವಿಧಾನಸಭೆಯಲ್ಲಿ ಹೋರಾಟ ಮಾಡುವುದಾಗಿ ಶಾಸಕ ವೈ.ಎಸ್.ವಿ. ದತ್ತ  ಭರವಸೆ ನೀಡಿದರು.
 ಪಟ್ಟಣದಲ್ಲಿ ತಾಲೂಕಿನ ತೆಲುಗುಗೌಡ ಸಮಾಜ ನೀಡಿದ ಗೌರವ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ಕೆಲವೇ ಸಂಖ್ಯೆಯಲ್ಲಿರುವ ಈ ಸಮುದಾಯವನ್ನು ರಾಜಕೀಯ ಮತ್ತು ಉದ್ಯೋಗ ಮೀಸಲಾತಿ ಹಕ್ಕಿನ ಬಗ್ಗೆ ಹಿಂದೆ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ ನಾನು ಈ ಸಮುದಾಯದ ಪರ ದನಿ ಎತ್ತಿರುವುದಾಗಿ ಹೇಳಿದರು. ಆರು ತಿಂಗಳಲ್ಲಿ ತೆಲುಗುಗೌಡ ಸಮುದಾಯ ಭವನದ ಕಾಮಗಾರಿ ಆರಂಭಿಸಲಾಗುವುದು ಎಂದರು.
 ಸಮಾಜದ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ, ಕಾರ್ಯದರ್ಶಿ ಎಲ್.ಎಲ್. ಮಂಜಪ್ಪ ಮಾತನಾಡಿ, ಸಮಾಜ ಆಡಿದ ಮಾತಿನಂತೆ ದತ್ತರವರಿಗೆ ಬಹುಮತ ನೀಡಿ ತನ್ನ ಮಾತು ಉಳಿಸಿಕೊಂಡಿದೆ.
   ಅವರು ಹಿಂದುಳಿದ ಈ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.   ತೆಲುಗುಗೌಡ ಸಮಾಜದ ಸಮಾಜದ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷ ತಿಮ್ಮೇಗೌಡ, ಖಜಾಂಚಿ ರಮೇಶ್, ಪಂಚೆಹೊಸಳ್ಳಿ ಓಂಕಾರಪ್ಪ, ಕುರುಬಗೆರೆ ಲೋಕೇಶ್, ನರಸಿಂಹಮೂರ್ತಿ, ವಕೀಲ ಗೋವಿಂದಸ್ವಾಮಿ, ಲೋಕೇಶ್ ಮತ್ತು ಗೋವಿಂದಸ್ವಾಮಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement