ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಂಪ್ರದಾಯಗಳ ಉಳಿವಿಗೆ ಶ್ರಮಿಸಿ

Lingaraj Badiger
Updated On : 15 May 2013, 10:51 am

ನರಸಿಂಹರಾಜಪುರ: ಆಧುನಿಕ ಯುಗಕ್ಕೆ ತಕ್ಕಂತೆ ನಮ್ಮ ಸಂಪ್ರದಾಯಗಳು ಬದಲಾಗುತ್ತಿದೆ. ಕುಟಂಭದ ಹಿರಿಯರು ನಮ್ಮ ಸಂಪ್ರದಾಯವನ್ನು ಆಚರಿಸುವ ಮೂಲಕ ಕಿರಿಯರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಚಿತ್ರ ನಟ ಶ್ರೀನಾಥ್ ಸಲಹೆ ನೀಡಿದರು.
ಇತ್ತೀಚೆಗೆ ಬಾಳೆಹೊನ್ನೂರು ಸಮೀಪದ ಬಿಳಾಲುಕೊಪ್ಪದ ಆನೆಕಲ್ಲು ಮಠದಲ್ಲಿ ನಡೆದ ವಿಪ್ರ ಬಾಂಧವರ ವಾರ್ಷಿಕ ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು. ಮನುಷ್ಯ ಸ್ನೇಹ ಜೀವಿಯಾಗಿದ್ದರೆ ಜೀವನದಲ್ಲಿ ಹೆಚ್ಚು ಮನಶ್ಶಾಂತಿ ದೊರಕಲಿದೆ. ಆಧುನಿಕ ಭರಾಟೆಯಲ್ಲಿ ಆದ್ಯಾತ್ಮಿಕ ಚಿಂತನೆಯನ್ನು ಮೂಲೆಗುಂಪು ಮಾಡಬಾರದು ಎಂದು ಅವರು ವಿಪ್ರ ಸಮಾಜದವರಿಗೆ ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಎಚ್.ಎಂ. ನಾಗರಾಜ ರಾವ್, ಸಂಸ್ಕೃತಿ ಪರಂಪರೆಗಳು ಪುನರುತ್ತಾನಗೊಳ್ಳಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿ ಹೆಚ್ಚಿದೆ. ಕರ್ಮಾಂಗಗಳನ್ನು ಇಂದಿನ ಜನಾಂಗದವರು ತಪ್ಪದೆ ಪಾಲಿಸಿಸುವ ಮೂಲಕ ಸಾರ್ಥಕ ಬದುಕಿಗೆ ಸಾಕ್ಷಿಯಾಗುವಂತೆ ಅವರು ಕರೆ ನೀಡಿದರು.
ಶಿವಮೊಗ್ಗ ಮತ್ತೂರಿನ ವಿದ್ವಾನ್ ಅಶ್ವತ್ಥನಾರಾಯಣ್ ಮಾತನಾಡಿ, ಧಾರ್ಮಿಕ ಸಂಪ್ರದಾಯ, ಸಂಸ್ಕಾರವನ್ನು ಉಳಿಸಿಕೊಳ್ಳುವ ಜವಬ್ದಾರಿ ಮಹಿಳೆಯರು ಹೊರಬೇಕಾಗಿದೆ. ಇಂದಿನ ದೃಶ್ಯ ಮಾದ್ಯಮದಿಂದ ನಮ್ಮ ಸಂಸ್ಕೃತಿಗೆ ದಕ್ಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಶೃಂಗೇರಿ ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಕೆ.ಎಸ್. ಚಂದ್ರಶೇಖರರಾವ್, ಮೇಗುಂದ ಹೋಬಳಿ ಘಟಕದ ಅಧ್ಯಕ್ಷೆ ಶ್ಯಾಮಲಾ ರಂಗನಾಥ್, ವಿಪ್ರ ಸಮಾಜದ ಮುಖಂಡರಾದ ಸುಬ್ಬರಾವ್, ಎಚ್.ವಿ. ಚಕ್ರಪಾಣಿ, ಶಿವಸ್ವಾಮಿ ಶರ್ಮ, ಮೇದಕ್ಕಿ ಪಟ್ಟಾಭಿರಾಮ ಹೆಬ್ಬಾರ್, ವಸುಮತಿ ಎನ್. ಮೂರ್ತಿ, ಬಿ.ವಿ. ಲಕ್ಷ್ಮೀರಾನಾರಾಯಣ, ಕೂಳೂರು ಶೃಂಗೇಶ್ವರರಾವ್, ಶಂ.ನ. ಶೇಷಗಿರಿ, ಕೆ.ವಿ. ವಿಜಯರಂಗ,ಬಿ.ವಿ. ಗೋಪಾಲಕೃಷ್ಣ, ಎಚ್.ವಿ. ಶಿವಾನಂದ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೇ.ಬ್ರ.ಎಂ.ವಿ. ಶಂಕರಭಟ್, ನ.ರಾ. ಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜದ ಹಿರಿಯರಿಗೆ ಸಹಾಯಧನ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement