ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ಥಳೀಯ ಸಂಸ್ಥೆಗಳಲ್ಲಿ 10.52 ಕೋಟಿ ತೆರಿಗೆ ಸಂಗ್ರಹ

Lingaraj Badiger
Updated On : 15 May 2013, 10:49 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 14
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ ಮಾರ್ಚ್ ಅಂತ್ಯದವರೆಗೆ 10.52 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ.
ಮಳಿಗೆ ಬಾಡಿಗೆ ಸಂಗ್ರಹದಲ್ಲಿ ಬೀರೂರು ಪ್ರಥಮ ಸ್ಥಾನದಲ್ಲಿದ್ದರೆ, ತರೀಕೆರೆ ಪುರಸಭೆ ಕೊನೆಯ ಸ್ಥಾನದಲ್ಲಿದೆ. ನೀರಿನ ತೆರಿಗೆ ಸಂಗ್ರಹದಲ್ಲಿ ಎನ್.ಆರ್. ಪುರ ಪಟ್ಟಣ ಪಂಚಾಯ್ತಿ ಪ್ರಥಮ ಸ್ಥಾನದಲ್ಲಿದೆ. ಬೀರೂರು ಕೊನೆಯ ಸ್ಥಾನದಲ್ಲಿದೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೃಂಗೇರಿ, ಮೂಡಿಗೆರೆ ಪಟ್ಟಣ ಪಂಚಾಯ್ತಿ ಹಾಗೂ ಅಧಿಸೂಚಿತ ಪಟ್ಟಣವಾಗಿರುವ ಕುದುರೆಮುಖ ಶೇ. 100 ರಷ್ಟು ಪ್ರಗತಿ ಸಾಧಿಸಿದೆ.
ಬಾಡಿಗೆ ಸಂಗ್ರಹ: ಮಳಿಗೆ ಬಾಡಿಗೆ, ಸಂತೆ ಸುಂಕ ಹರಾಜು, ಮಾಂಸದ ಅಂಗಡಿ ಹರಾಜು, ಉದ್ಯಮ ಪರವಾನಗಿ ಶುಲ್ಕ, ನೆಲ ಬಾಡಿಗೆ ಇತರೆ ಮೂಲಗಳಿಂದ ಚಿಕ್ಕಮಗಳೂರು ನಗರಸಭೆ 102.78 ಲಕ್ಷ ಸಂಗ್ರಹ ಮಾಡಿದೆ. ಇದರಲ್ಲಿ 63.23 ಲಕ್ಷ ಮಳಿಗೆ ಬಾಡಿಗೆ. ಕಡೂರು ಪುರಸಭೆ 27.33 ಲಕ್ಷ ಸಂಗ್ರಹ ಮಾಡಿದೆ. ಇದರಲ್ಲಿ ಮಳಿಗೆ ಬಾಡಿಗೆ 21.65 ಲಕ್ಷ ಬೀರೂರು ಪುರಸಭೆ 21.66 ಲಕ್ಷ, ತರೀಕೆರೆ ಪುರಸಭೆ 17.66 ಲಕ್ಷ ಸಂಗ್ರಹದೊಂದಿಗೆ ಶೇ. 57 ರಷ್ಟು ಗುರಿ ಸಾಧಿಸಿದೆ. ಇನ್ನು 13.48 ಲಕ್ಷ ಸಂಗ್ರಹ ಮಾಡಬೇಕಾಗಿದೆ.
ಎನ್.ಆರ್.ಪುರ ಪಟ್ಟಣ ಪಂಚಾಯ್ತಿ 37.13 ಲಕ್ಷ ಸಂಗ್ರಹ ಮಾಡಿದ್ದು, ಶೇ. 63 ರಷ್ಟು ಪ್ರಗತಿ ಸಾಧಿಸಿದೆ. ಕೊಪ್ಪ ಪಟ್ಟಣ ಪಂಚಾಯ್ತಿ 28.47 ಲಕ್ಷ ಸಂಗ್ರಹಿಸಿದ್ದು, ಶೇ. 86 ರಷ್ಟು ಗುರಿ ಮುಟ್ಟಿದೆ. ಶೃಂಗೇರಿ ಪಟ್ಟಣ ಪಂಚಾಯ್ತಿ 19.17 ಲಕ್ಷ ಸಂಗ್ರಹಿಸಿ, ಶೇ. 95 ರಷ್ಟು ಪ್ರಗತಿ ಸಾಧಿಸಿದ್ದರೆ, ಮೂಡಿಗೆರೆ ಪಟ್ಟಣ ಪಂಚಾಯ್ತಿ 18.90 ಲಕ್ಷ ಸಂಗ್ರಹಿಸಿ, ಶೇ. 77 ರಷ್ಟು ಗುರಿ ಮುಟ್ಟಿದೆ. ಒಟ್ಟಾರೆ 8  ಸ್ಥಳೀಯ ಸಂಸ್ಥೆಗಳು 273.09 ಲಕ್ಷ ಸಂಗ್ರಹಿಸಿದ್ದು, ಇನ್ನು 28.71 ಲಕ್ಷ ಸಂಗ್ರಹ ಮಾಡಬೇಕಾಗಿದೆ. ಶೇ. 99 ರಷ್ಟು ಪ್ರಗತಿ ಸಾಧಿಸಲಾಗಿದೆ.
ಆಸ್ತಿ ತೆರಿಗೆ: ಆಸ್ತಿ ತೆರಿಗೆ ಸಂಗ್ರಹದಲ್ಲಿ 608.94 ಲಕ್ಷ ಸಂಗ್ರಹದ ಗುರಿ ಇದ್ದು, ಈ ಪೈಕಿ ಸ್ಥಳೀಯ ಸಂಸ್ಥೆಗಳಲ್ಲಿ 541.46 ಲಕ್ಷ ಸಂಗ್ರಹವಾಗಿದ್ದು, ಒಟ್ಟಾರೆ ಶೇ. 89 ರಷ್ಟು ಪ್ರಗತಿ ಸಾಧಿಸಲಾಗಿದೆ.
ಚಿಕ್ಕಮಗಳೂರು ನಗರಸಭೆ 425.39 ಲಕ್ಷ ಸಂಗ್ರಹದ ಗುರಿಯನ್ನು  ಹೊಂದಿದ್ದು, ಮಾರ್ಚ್ ಅಂತ್ಯದವರಿಗೆ 373.99 ಲಕ್ಷ ಸಂಗ್ರಹಿಸಿದೆ. ಕಡೂರು ಪುರಸಭೆ 58.14 ಲಕ್ಷದಲ್ಲಿ 50.92 ಲಕ್ಷ, ಬೀರೂರು  ಪುರಸಭೆ 27.15 ಲಕ್ಷದಲ್ಲಿ 20.45 ಲಕ್ಷ, ತರೀಕೆರೆ ಪುರಸಭೆ 40.02 ಲಕ್ಷದಲ್ಲಿ 39.35 ಲಕ್ಷ, ಎನ್.ಆರ್.ಪುರ ಪಟ್ಟಣ ಪಂಚಾಯ್ತಿ 9 ಲಕ್ಷದಲ್ಲಿ 8.93 ಲಕ್ಷ, ಕೊಪ್ಪ ಪಟ್ಟಣ ಪಂಚಾಯ್ತಿ 18.01 ಲಕ್ಷದಲ್ಲಿ 16.13 ಲಕ್ಷ, ಶೃಂಗೇರಿ ಪಟ್ಟಣ ಪಂಚಾಯ್ತಿ 9.90 ಲಕ್ಷ ಗುರಿಯನ್ನು ಹೊಂದಿದ್ದು, 10.36 ಲಕ್ಷ, ಮೂಡಿಗೆರೆ ಪಟ್ಟಣ ಪಂಚಾಯ್ತಿ 19.65 ಲಕ್ಷ ಹಾಗೂ ಕುದುರೆಮುಖ 1.68 ಲಕ್ಷದ ಗುರಿ ಮುಟ್ಟಿ ಶೇ. 100 ರಷ್ಟು ಪ್ರಗತಿ ಸಾಧಿಸಿವೆ.
ನೀರಿನ ತೆರಿಗೆ: ನೆಲ ಬಾಡಿಗೆ, ಆಸ್ತಿ ತೆರಿಗೆಗೆ ಹೋಲಿಕೆ ಮಾಡಿದರೆ ನೀರಿನ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧ್ಯವಾಗಿಲ್ಲ. ಜಿಲ್ಲೆಯ ಒಟ್ಟಾರೆ ಪ್ರಗತಿ ಶೇ. 70 ರಷ್ಟು ಮಾತ್ರ.
ಚಿಕ್ಕಮಗಳೂರು ನಗರದಲ್ಲಿ 9814 ಗೃಹ ಬಳಕೆ, 263 ವಾಣಿಜ್ಯ ಹಾಗೂ 55 ಸಾರ್ವಜನಿಕ ನಲ್ಲಿಗಳಿದ್ದು, ಇವುಗಳಿಂದ ಕಳೆದ ವರ್ಷದಲ್ಲಿ 141.12 ಲಕ್ಷ ನೀರಿನ ಕಂದಾಯ ವಸೂಲಿಯ ಗುರಿಯನ್ನು ಹೊಂದಲಾಗಿದ್ದು, ಮಾರ್ಚ್ ಅಂತ್ಯದವರೆಗೆ ಸಂಗ್ರಹವಾಗಿದ್ದು 125.09 ಲಕ್ಷ, ಅಂದರೆ, ಶೇ. 89 ರಷ್ಟು ಪ್ರಗತಿ ಸಾಧಿಸಲಾಗಿದೆ.
ಕಡೂರು ಪಟ್ಟಣದಲ್ಲಿ 460 ಗೃಹ ಬಳಕೆ, 65 ವಾಣಿಜ್ಯ  ಹಾಗೂ 2420 ಸಾರ್ವಜನಿಕ ನಲ್ಲಿಗಳಿದ್ದು, ಇವುಗಳಿಂದ 27.46 ಲಕ್ಷ ಸಂಗ್ರಹದ ಗುರಿ ಇತ್ತು. ಆದರೆ, 16.91 ಲಕ್ಷ ಮಾತ್ರ ಸಂಗ್ರಹವಾಗಿದ್ದು, ಶೇ. 62 ರಷ್ಟು ಗುರಿ ಮುಟ್ಟಲಾಗಿದೆ.
ಬೀರೂರು ಪಟ್ಟಣದಲ್ಲಿ 2105 ಗೃಹ ಬಳಕೆ, 66 ವಾಣಿಜ್ಯ ಹಾಗೂ 349 ಸಾರ್ವಜನಿಕ ನಲ್ಲಿಗಳಿದ್ದು, ಇವುಗಳಿಂದ 55.08 ಲಕ್ಷ ನೀರಿನ ತೆರಿಗೆ ಸಂಗ್ರಹ  ಗುರಿಯನ್ನು ಹೊಂದಲಾಗಿತ್ತು. ಆದರೆ, ಮಾರ್ಚ್ ಅಂತ್ಯದವರೆಗೆ ಸಂಗ್ರಹವಾಗಿದ್ದು ಕೇವಲ 16.96 ಲಕ್ಷ ಮಾತ್ರ.
ಅಂದರೆ ಶೇ. 31 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಇದಕ್ಕೆ ಕಾರಣ, ಇಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಇಂತಹ ಸಂದರ್ಭದಲ್ಲಿ ನೀರಿಗೆ ತೆರಿಗೆ ಸಂಗ್ರಹಕ್ಕೆ ಕೈ ಹಾಕಿದರೆ ಸಾರ್ವಜನಿಕರು ಸ್ಪಂಧಿಸುವುದಿಲ್ಲ. ಅದುದರಿಂದ ಒತ್ತಾಯ ಮಾಡದೆ ಮನವೊಲಿಸಿ ನೀರಿನ ತೆರಿಗೆ ಸಂಗ್ರಹ ಮಾಡಲಾಗಿದೆ.
ತರೀಕೆರೆ ಪಟ್ಟಣದಲ್ಲಿ 4312 ಗೃಹ ಬಳಕೆ, 26 ವಾಣಿಜ್ಯ, 486 ಸಾರ್ವಜನಿಕ ನಲ್ಲಿಗಳಿದ್ದು, ಇವುಗಳಿಂದ 51 ಲಕ್ಷ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು, 37.68 ಲಕ್ಷ ಸಂಗ್ರಹವಾಗಿದೆ. ಎನ್.ಆರ್.ಪುರ ಪಟ್ಟಣದಲ್ಲಿ 1278 ಗೃಹ ಬಳಕೆ, 14 ವಾಣಿಜ್ಯ, 47 ಸಾರ್ವಜನಿಕ ನಲ್ಲಿಗಳಿದ್ದು, ಇಲ್ಲಿ 12.40 ಲಕ್ಷ ರು. ಸಂಗ್ರಹದ ಗುರಿಯಲ್ಲಿ 11.23 ಲಕ್ಷ ರು. ತೆರಿಗೆ ಸಂಗ್ರಹವಾಗಿದೆ.
ಕೊಪ್ಪದಲ್ಲಿ 1237 ಗೃಹ  ಬಳಕೆ, 102 ವಾಣಿಜ್ಯ, 5 ಸಾರ್ವಜನಿಕ ನಲ್ಲಿಗಳಿದ್ದು, ಇಲ್ಲಿನ 15.71 ಲಕ್ಷ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು, ಈ ಪೈಕಿ 11.86 ಲಕ್ಷ ಸಂಗ್ರಹವಾಗಿದೆ.
ಶೃಂಗೇರಿ ಪಟ್ಟಣದಲ್ಲಿ 787 ಗೃಹ ಬಳಕೆ, 31 ವಾಣಿಜ್ಯ, 35 ಸಾರ್ವಜನಿಕ ನಲ್ಲಿಗಳಿದ್ದು, ಇಲ್ಲಿ 8.07 ಲಕ್ಷ ಸಂಗ್ರಹದ ಗುರಿ ಇದ್ದು, ಈ ಪೈಕಿ 1.35 ಲಕ್ಷ ಸಂಗ್ರಹವಾಗಿದೆ.
ಮೂಡಿಗೆರೆ ಪಟ್ಟಣದಲ್ಲಿ 1477 ಗೃಹ ಬಳಕೆ, 65 ವಾಣಿಜ್ಯ, 40 ಸಾರ್ವಜನಿಕ ನಲ್ಲಿಗಳಿದ್ದು, ಇವುಗಳಿಂದ 27.34 ಲಕ್ಷ ನೀರಿನ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು, ಇದರಲ್ಲಿ 11.16 ಲಕ್ಷ ಸಂಗ್ರಹಿಸಿ ಶೇ. 41 ಗುರಿ ಮುಟ್ಟಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement