42 ಮಂದಿಗೆ ಠೇವಣಿ ಗೋತಾ...!
ಚಿಕ್ಕಮಗಳೂರು ಮೇ 15
ಕಳೆದ 10 ದಿನಗಳ ಹಿಂದೆ ನಡೆದಿದ್ದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಣದಲ್ಲಿದ್ದ 56 ಮಂದಿ ಅಭ್ಯರ್ಥಿಗಳಲ್ಲಿ 42 ಮಂದಿ ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಠೇವಣಿ ಕಳೆದುಕೊಂಡವರಲ್ಲಿ ಪಕ್ಷೇತರ ಜತೆಗೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕೆಜೆಪಿ, ಜೆಡಿಎಸ್, ಸಿಪಿಐ ಪಕ್ಷಗಳ ಅಭ್ಯರ್ಥಿಗಳು ಸಹ ಇದ್ದಾರೆ.
ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅವಿನಾಶ್, ಜೆಡಿಎಸ್ ಅಭ್ಯರ್ಥಿ ಟಿ.ಆರ್. ನಾಗರಾಜ್, ಕಡೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೀರೂರು ದೇವರಾಜ್, ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ವೇದಮೂರ್ತಿ, ಮೂಡಿಗೆರೆ ಕ್ಷೇತ್ರದಲ್ಲಿ ಸಿಪಿಐನ ಸಾತಿ ಸುಂದರೇಶ್ ಅವರು ಠೇವಣಿ ಕಳೆದುಕೊಂಡರಲ್ಲಿ ಪ್ರಮುಖರು.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಿದೆ. ಆದರೆ, ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡಿಲ್ಲ. ಬಿಜೆಪಿ ಎರಡರಲ್ಲಿ, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ.
ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ 8 ಅಭ್ಯರ್ಥಿಗಳಲ್ಲಿ 5 ಮಂದಿ, ತರೀಕೆರೆಯ 16 ಅಭ್ಯರ್ಥಿಗಳಲ್ಲಿ 13, ಶೃಂಗೇರಿಯ 8 ಅಭ್ಯರ್ಥಿಗಳಲ್ಲಿ 6, ಚಿಕ್ಕಮಗಳೂರಿನ 15 ಅಭ್ಯರ್ಥಿಗಳಲ್ಲಿ 12, ಕಡೂರಿನ 9 ಅಭ್ಯರ್ಥಿಗಳಲ್ಲಿ 6 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಠೇವಣಿ ಕಳೆದುಕೊಂಡ ಅಭ್ಯರ್ಥಿಗಳ ವಿವರ ಈ ಕೆಳಕಂಡಂತೆ ಇದೆ.
ಮೂಡಿಗೆರೆ: ಸಾತಿ ಸುಂದರೇಶ್ (ಸಿಪಿಐ), ಯು.ಬಿ. ಮಂಜಯ್ಯ (ಬಿಎಸ್ಪಿ), ಕುಮಾರ್ (ಸಿಪಿಐ)(ಎಂ.ಎಲ್.) ರೆಡ್ ಸ್ಟಾರ್, ನಂಜುಂಡ, ಬಿ.ಎಂ. ರಮೇಶ್ (ಪಕ್ಷೇತರರು).
ಶೃಂಗೇರಿ: ಉಮೇಶ್ (ಸಿಪಿಐ)(ಎಂ.ಎಲ್.) ರೆಡ್‌ಸ್ಟಾರ್, ಪೂರ್ಣೇಶ್ (ಬಿಎಸ್‌ಆರ್), ಅಬ್ರಾಹಂ, ಕೆ.ಸಿ. ಪ್ರಕಾಶ್, ಉಮೇಶ್‌ಕುಮಾರ್, ಸಿ. ಬಸವರಾಜ್ (ಪಕ್ಷೇತರರು).
ಚಿಕ್ಕಮಗಳೂರು: ದ್ವಾರಕೀಶ್ (ಹಿಂದೂಸ್ಥಾನ್ ನಿರ್ಮಾಣದಳ), ಕೆ.ಪಿ. ವೇದಮೂರ್ತಿ (ಕೆಜೆಪಿ), ಸುರೇಶ್ (ಸಿಪಿಐ) (ಎಂ.ಎಲ್.) ರೆಡ್‌ಸ್ಟಾರ್, ಟಿ. ಹರೀಶ್ (ಜೆಡಿಯು), ಅಪ್ಸರ್ ಪಾಶಾ (ಎನ್‌ಸಿಪಿ), ಅಪ್ಸರ್ ಪಾಶಾ, ಗುರುಶಾಂತಪ್ಪ, ಧರ್ಮೇಗೌಡ, ಮುನಿಯಬೋವಿ, ಕೆ. ರೇವಣ್ಣ, ಎಂ.ಎಂ. ಸುಧೀರ್, ಸ್ನೇಕ್ ನರೇಶ್ (ಪಕ್ಷೇತರರು).
ತರೀಕೆರೆ: ಟಿ.ಆರ್. ನಾಗರಾಜ್ (ಜೆಡಿಎಸ್), ಅವಿನಾಶ್ (ಬಿಜೆಪಿ), ದೇವರಾಜ್ (ಸರ್ವೋದಯ ಕರ್ನಾಟಕ), ಕೆ. ಮಂಜುನಾಥ್ (ಬಿಎಸ್‌ಆರ್), ತೀರ್ಥಪ್ಪ (ಲೋಕಸತ್ತಾ), ದೋರನಾಳ್ ಸುರೇಶ್, ಎಚ್.ಪಿ. ಅಶೋಕ್, ಜಯರಾಮ್, ಬಿ.ಆರ್. ನೀಲಕಂಠಪ್ಪ, ಪರಮೇಶ್ ನಾಯಕ್, ಎಚ್.ಆರ್. ನೀಲಕಂಠಪ್ಪ, ಎ. ಸುರೇಶ್, ಟಿ.ಎಸ್. ಸುರೇಶ್ (ಪಕ್ಷೇತರರು).
ಕಡೂರು: ಬೀರೂರು ದೇವರಾಜ್ (ಬಿಜೆಪಿ), ಕೆಂಪರಾಜು (ಬಿಎಸ್‌ಆರ್), ಮಧು (ಲೋಕಸತ್ತಾ) ಬಿ.ಟಿ. ಕುಮಾರ್‌ನಾಯ್ಕ್ (ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ), ಗಂಗಾಧರಪ್ಪ, ನಾಗರಾಜ್ (ಪಕ್ಷೇತರರು).