ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುರುಬರ ವೇದಿಕೆ ವಿಜಯೋತ್ಸವ

Lingaraj Badiger
Updated On : 16 May 2013, 10:55 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಮೇ 15
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕುರುಬರ ಕ್ರಿಯಾಶೀಲ ವೇದಿಕೆಯ ಕಾರ್ಯಕರ್ತರು ಬುಧವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನಗರದ ಗುರುನಾಥ ವೃತ್ತದಲ್ಲಿ ವೇದಿಕೆಯ ಮುಖಂಡರು ಜಯಘೋಷದೊಂದಿಗೆ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಎ.ಟಿ. ಅನೂಪ್‌ಕುಮಾರ್ ಮಾತನಾಡಿ, ಬಡವರು, ಹಿಂದುಳಿದ ವರ್ಗದ ಆಶಾಕಿರಣವಾದ ಸಿದ್ದರಾಮಯ್ಯ ಅವರ ಹಲವು ದಶಕಗಳ ಪ್ರಾಮಾಣಿಕ ರಾಜಕಾರಣದ ಶ್ರಮಕ್ಕೆ ಪ್ರತಿಫಲ ಸಿಕ್ಕಿದಂತಾಗಿದೆ.
ಇವರ ಆಡಳಿತಾವಧಿಯಲ್ಲಿ ರಾಜ್ಯದ ಜನರಿಗೆ ಉತ್ತಮ ಸೇವೆ ಸಲ್ಲಿಸುವ ಅವಕಾಶ ಕರುಣಿಸಲಿ ಎಂದು ಶುಭ ಕೋರಿದರು.
ಅಗ್ರಹಾರ ಸತೀಶ್, ಕೆಂಪನಹಳ್ಳಿ ಮಹೇಶ್, ಹನುಮಂತೇಗೌಡ, ರವಿ, ಪ್ರಕಾಶ್, ಬಸವರಾಜು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement