ಶಂಕರ ಜಯಂತಿ ಆಚರಣೆ
ನರಸಿಂಹರಾಜಪುರ: ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಶಂಕರ ಜಯಂತಿ ಅಂಗವಾಗಿ ರುದ್ರಾಭಿಷೇಕ, ಶಂಕರರ ಭಾವಚಿತ್ರಕ್ಕೆ ಕಲ್ಪೋಕ್ತ ಪೂಜೆ, ಆಚಾರ್ಯರ ಜೀವನ ಚರಿತ್ರೆ ಪಾರಾಯಣ, ಸಾಂಕಾರ ಶೋತ್ರ ಪಠಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನಡೆಯಿತು.
ಉಮಾಮಹೇಶ್ವರ ದೇವಸ್ಥಾನದ ಸಂಚಾಲಕ ಹಿರಿಯಣ್ಣಯ್ಯ ನೇತೃತ್ವದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ವೇ.ಬ್ರ.ವಿ.ಎಸ್. ಕೃಷ್ಣಭಟ್ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶೃಂಗೇರಿ ಶಾರದಾ ಪೀಠದಿಂದ ಆಶೀರ್ವಾದದೊಂದಿಗೆ ಕಳಿಸಲಾಗಿದ್ದ ಶಂಕರರ ಭಾವಚಿತ್ರ ಮತ್ತು ಅಷ್ಟೋತ್ತರ ಶತ ನಾಮಾವಳಿಯ ಪ್ರತಿಗಳನ್ನು ಭಕ್ತರಿಗೆ ವಿತರಿಸಲಾಯಿತು.